ಅರಮಲೆಬೆಟ್ಟ: “ಬ್ರಹ್ಮಕುಂಭಾಭಿಷೇಕ ಮಾದರಿ‌ ಕಾರ್ಯಕ್ರಮ”: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಬ್ರಹ್ಮಕುಂಭಾಭಿಷೇಕ ಮತ್ತು ಜಾತ್ರಾಮಹೋತ್ಸವ ನಡೆಯುತ್ತಿದ್ದು ಇಂದು (ಫೆ.12)ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕ್ಷೇತ್ರಕ್ಕೆ ಭೇಟಿ ನೀಡಿ ‘ಪ್ರಕೃತಿ ಮಧ್ಯೆ ಇರುವ ದೈವಸ್ಥಾನ ಉತ್ತಮ ರೀತಿಯಲ್ಲಿ ಅಭಿವೃದ್ಧಿಯಾಗಿರುವುದು ಸಂತೋಷ ತಂದಿದೆ’ ಎಂದಿದ್ದಾರೆ.

ದೈವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿ, ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿದರು.

ಬಳಿಕ ಮಾದ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಷ್ಟದಲ್ಲಿ ಬಂದ ಭಕ್ತರಿಗೆ ಅಭಯ ನೀಡುವ ದೈವ ಅರಮಲೆಬೆಟ್ಟ ಕುಂಭಕಂಠಿಣಿ ತಾಯಿ. ಫೆ. 09ರ ಹೊರೆಕಾಣಿಯ ವೈಭವದ ಮೆರವಣಿಗೆಯಿಂದ ಈ ದಿನದವರೆಗೆ ನಡೆದ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ, ಹಾಗೂ ಅನ್ನದಾನದ ಮೂಲಕ ಈ ಬ್ರಹ್ಮಕುಂಭಾಭಿಷೇಕ ನಿಜವಾಗಿಯೂ ಮಾದರಿ ಕಾರ್ಯಕ್ರಮವಾಗಿದೆ ಎಂದರು.

error: Content is protected !!