ಬೆಳ್ತಂಗಡಿ: ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಬ್ರಹ್ಮಕುಂಭಾಭಿಷೇಕ ಹಾಗೂ ಜಾತ್ರಾಮಹೋತ್ಸವ ನಡೆಯುತ್ತಿದ್ದು 4ನೇ ದಿನವಾದ ಇಂದು ಬೆಳಗ್ಗೆ 8:30ಕ್ಕೆ ಕುಂಭ ಸಂಕ್ರಮಣದ ಕುಂಭಲಗ್ನದಲ್ಲಿ ಪ್ರಧಾನ ಕುಂಭಾಭಿಷೇಕ ಪೂಜೆ ನಡೆದಿದೆ.
ದೈವ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ಪ್ರತಿಷ್ಠಾ ಕಲಶಾಭಿಷೇಕ, ಪರಿಕಲಶಾಭಿಷೇಕ, ಪಂಚಪರ್ವ ಪೂಜೆ, ಧ್ವಜಾರೋಹಣ, ಬಲಿ ಉತ್ಸವ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಇಂದು ಸಂಜೆ 5ರಿಂದ ಬಲಿ ಉತ್ಸವ ನಡೆದು ಬಳಿಕ ರಾತ್ರಿ 8:30ರಿಂದ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಲಿದೆ.