ಪಿಲ್ಯ,ಕಾರುಗಳ ನಡುವೆ ಅಪಘಾತ, ಮಗು ಸೇರಿದಂತೆ ನಾಲ್ವರಿಗೆ ಗಾಯ, ಇಬ್ಬರು ಗಂಭೀರ:

 

 

 

ಬೆಳ್ತಂಗಡಿ: ಎರಡು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಮಗು ಸೇರಿದಂತೆ ನಾಲ್ವರು ಗಾಯಗೊಂಡ ಘಟನೆ ಭಾನುವಾರ ಸಂಜೆ ಪಿಲ್ಯ ಸಮೀಪ ನಡೆದಿದೆ.
ಉಡುಪಿ ಕಡೆಯಿಂದ ಬರುತಿದ್ದ ಕಾರು ಬೆಳ್ತಂಗಡಿ ಕಡೆಯಿಂದ ಕಾರ್ಕಳ ಕಡೆಗೆ ಹೋಗುತಿದ್ದ ಕಾರಿನ ನಡುವೆ ಪಿಲ್ಯ ಸಮೀಪದ ಗೋಳಿ ಕಟ್ಟೆ ನಾವರ ಮಹಾಲಿಂಗೇಶ್ವರ ದೇವಸ್ಥಾನದ ದ್ವಾರದ ಬಳಿ ಅಪಘಾತ ನಡೆದಿದೆ.‌ಅಪಘಾತದ ರಭಸಕ್ಕೆ ಇಕೋ ಕಾರಿನಲ್ಲಿದ್ದ ಮಗು ಸೇರಿದಂತೆ ನಾಲ್ವರಿಗೆ ಗಾಯಗಳಾಗಿದ್ದು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವೇಣೂರು ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ.ಕಾರಿನಲ್ಲಿದ್ದವರ ಮಾಹಿತಿ ತಿಳಿದು ಬರಬೇಕಾಗಿದೆ.

error: Content is protected !!