ಲಾಯಿಲ ಗ್ರಾಮ ಪಂಚಾಯತ್ ನ ಗ್ರಂಥಾಲಯ ಸ್ಥಳಾಂತರಕ್ಕೆ ಆದೇಶ : ದ.ಕ.ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕ್ರಮಕ್ಕೆ ಗ್ರಾಮಸ್ಥರ ಅಸಾಮಾಧಾನ: ನಮ್ಮ ಮಕ್ಕಳು ಪುಸ್ತಕ ಓದಲು 3 ಕಿ.ಮೀ ದೂರ ನಡೆಯಬೇಕೆ..?, ಸಾರ್ವಜನಿಕರ ಪ್ರಶ್ನೆ:

 

 

 

ಬೆಳ್ತಂಗಡಿ: ಪಂಚಾಯತ್ ನಲ್ಲಿ ಇರುವ ಸಾರ್ವಜನಿಕ ಗ್ರಂಥಾಲಯವನ್ನು ವಾರ್ಡೊಂದರಲ್ಲಿ ನಿರ್ಮಾಣವಾದ ಹೊಸ ಕಟ್ಟಡಕ್ಕೆ ಶಿಫ್ಟ್ ಮಾಡುವಂತೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆದೇಶ ನೀಡಿರುವ ಘಟನೆ ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ನಡೆದಿದೆ.
ಲಾಯಿಲ ಗ್ರಾಮದಲ್ಲಿ ಹಲವಾರೂ ವರ್ಷಗಳಿಂದ ಸಾರ್ವಜನಿಕ ಗ್ರಂಥಾಲಯ ಕಾರ್ಯನಿರ್ವಹಿಸುತಿದ್ದು ಹತ್ತಿರದಲ್ಲೇ ಇರುವಂತಹ ಎರಡು ಶಾಲೆಗಳ ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ಉಪಯೋಗವಾಗುತಿತ್ತು. ಅದರೆ ಈಗ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಗ್ರಾಮ ಪಂಚಾಯತ್ ನಿಂದ ಸುಮಾರು 3 ಕಿ.ಮೀ ದೂರದ 4 ನೇ ವಾರ್ಡಿನಲ್ಲಿ ನಿರ್ಮಾಣವಾಗಿರುವ ನೂತನ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಆದೇಶಿಸಿರುವುದು ಸಾರ್ವಜನಿಕರ ಅಸಾಮಾಧಾನಕ್ಕೆ ಕಾರಣವಾಗಿದೆ. ಎರಡು ವರ್ಷಗಳ ಹಿಂದೆ ಎಸ್. ಸಿ‌. ಎಸ್.ಟಿ‌.ಕುಟುಂಬಗಳು ಹೆಚ್ಚಿರುವ ಕಡೆ ಗ್ರಂಥಾಲಯ ನಿರ್ಮಾಣ ಮಾಡುವಂತೆ ಜಿಲ್ಲಾ ಪಂಚಾಯತ್ ಆದೇಶ ನೀಡಿತ್ತು. ಅದರೆ ಪಂಚಾಯತ್ ವ್ಯಾಪ್ತಿಯ ಒಂದನೇ ಮತ್ತು ನಾಲ್ಕನೇ ವಾರ್ಡಿನಲ್ಲಿ ಪರಿಶಿಷ್ಟ ಜಾತಿ ಪಂಗಡಕ್ಕೆ ಸೇರಿರುವ ಹೆಚ್ಚು ಕುಟುಂಬಗಳಿರುವುದರಿಂದ , ಅದಲ್ಲದೇ ಒಂದನೇ  ವಾರ್ಡ್, ಕರ್ನೊಡಿ ಶಾಲೆ, ಪಡ್ಲಾಡಿ ಶಾಲೆ ಗಳಿಗೆ ಪಂಚಾಯತ್ ನಲ್ಲಿ ಇರುವ ಗ್ರಂಥಾಲಯ ಉಪಯೋಗಕ್ಕೆ ಹತ್ತಿರ ಇರುವ ಕಾರಣ ಪಂಚಾಯತ್ ಆಡಳಿತ ಮಂಡಳಿ ಸಾರ್ವಜನಿಕರ ಮನವಿಯಂತೆ ಪಂಚಾಯತ್ ಬಳಿಯೇ ಸುಸಜ್ಜಿತ ಗ್ರಂಥಾಲಯ ನಿರ್ಮಾಣ ಮಾಡುವ ಬಗ್ಗೆ ನಿರ್ಣಯಿಸಿತ್ತು. ಅದರೆ ಈ ವೇಳೆ 4 ನೇ ವಾರ್ಡಿನಲ್ಲಿ ಹೆಚ್ಚು ಪರಿಶಿಷ್ಟ ಜಾತಿ ಪಂಗಡಗಳ ಕುಟುಂಬಗಳು ಇರುವುದರಿಂದ   ಪುತ್ರಬೈಲು ಬಳಿಯೇ ಗ್ರಂಥಾಲಯ ನಿರ್ಮಿಸಬೇಕು ಯಾವುದೇ ಕಾರಣಕ್ಕೂ   ಪಂಚಾಯತ್  ಬಳಿ ನಿರ್ಮಿಸಬಾರದು ಎಂದು ಪುತ್ರಬೈಲು ನಿವಾಸಿ ಸುರೇಶ್ ಬೈರ ಸೇರಿದಂತೆ ಇತರರು ಪಟ್ಟು ಹಿಡಿದಾಗ, ಗ್ರಾಮಸ್ಥರ ಹೆಚ್ಚಿನ ಉಪಯೋಗಕ್ಕಾಗಿ ಪಂಚಾಯತ್ ಬಳಿ ನಿರ್ಮಾಣ ಮಾಡಿ ನಾಲ್ಕನೇ ವಾರ್ಡಿನಲ್ಲಿ ನಿರ್ಮಿಸುವುದಾದರೆ  ಒಂದನೇ ವಾರ್ಡಿನಲ್ಲಿಯೂ ಅತೀ ಹೆಚ್ಚಿನ ಸಂಖ್ಯೆಯ ಪರಿಶಿಷ್ಟ ಜಾತಿ ಪಂಗಡಗಳಿಗೆ ಸೇರಿದ ಕುಟುಂಬಗಳು ಇವೆ ಅಲ್ಲಿ ನಿರ್ಮಿಸಿ ಎಂಬ ಬಗ್ಗೆ ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ ಹಾಗೂ ಇತರರು  ಅಸಾಮಾಧಾನ ಹೊರಹಾಕಿದರು. . ಈ ವೇಳೆ ಗ್ರಾಮಸ್ಥರ ಮನವೊಲಿಸಿ ಮುಂದಿನ ದಿನಗಳಲ್ಲಿ ಒಂದನೇ ವಾರ್ಡಿನಲ್ಲಿ ಗ್ರಂಥಾಲಯ ನಿರ್ಮಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು.ಅದ್ದರಿಂದ ಈ ಬಾರಿ

ನಾಲ್ಕನೇ ವಾರ್ಡಿನ ಪುತ್ರಬೈಲು ಎಂಬಲ್ಲಿ ಮಾಡುವ ಬಗ್ಗೆ ನಿರ್ಣಯಿಸಿ ತಾಲೂಕು ಪಂಚಾಯತ್ , ಕೆ ಆರ್.ಐ. ಡಿ.ಎಲ್ ನಿಂದ  ರೂ 5 ಲಕ್ಷ ಹಾಗೂ ತಾಲೂಕು ಪಂಚಾಯತ್ ನಿಂದ ರೂ 5 ಲಕ್ಷ ಅನುದಾನದಲ್ಲಿ ಕಟ್ಟಡದ ನಿರ್ಮಾಣ ಮಾಡಲಾಗಿತ್ತು.ಈ ಮಧ್ಯೆಯೇ ಸುರೇಶ್ ಬೈರ ಅವರು ಹಾಗೂ  ಕೆಲವು ಸ್ಥಳೀಯರು ಪಂಚಾಯತ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಾಲಯವನ್ನೂ ಕೂಡ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಮನವಿ ನೀಡಿದ್ದು, ಈ ಮನವಿ ಮೇರೆಗೆ ಪಂಚಾಯತ್ ಗೆ ಭೇಟಿ ನೀಡಿದ್ದ ಉಪ ಕಾರ್ಯದರ್ಶಿ ಯಾವುದೇ ಇತರ ಮಾಹಿತಿ  ತಿಳಿದುಕೊಳ್ಳದೇ ಸ್ಥಳಾಂತರಕ್ಕೆ ಆದೇಶ ನೀಡಿದ್ದು, ಮತ್ತಷ್ಟು  ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದೆ,

ಹೊಸ ಗ್ರಂಥಾಲಯಕ್ಕೆ ಹೊಸ ಪಿಠೋಪಕರಣ ಪುಸ್ತಕಗಳ ವ್ಯವಸ್ಥೆ ಮಾಡಿ ಪಂಚಾಯತ್ ನಲ್ಲಿ ಕಾರ್ಯಚರಿಸುತ್ತಿರುವ ಗ್ರಂಥಾಲಯ ಸ್ಥಳಾಂತರಿಸದೇ ಸಾರ್ವಜನಿಕರ ಉಪಯೋಗಕ್ಕಾಗಿ ಇಡಬೇಕು ಒಂದು ವೇಳೆ ಸ್ಥಳಾಂತರಿಸಿದರೆ ಪಂಚಾಯತ್ ಎದುರು ಸಾರ್ವಜನಿಕರು ಶಾಲಾ ಮಕ್ಕಳು ಸೇರಿ ಪ್ರತಿಭಟನೆ ಮಾಡುವ ಬಗ್ಗೆ ಎಚ್ಚರಿಕೆಯನ್ನು ಸಾರ್ವಜನಿಕರು ನೀಡಿದ್ದಾರೆ..ಈ ಬಗ್ಗೆ ಪಂಚಾಯತ್ ಆಡಳಿತ ಮಂಡಳಿ ಕೂಡ ಉಪ ಕಾರ್ಯದರ್ಶಿಯವರ ಆದೇಶಕ್ಕೆ ಬೇಸರ ವ್ಯಕ್ತಪಡಿಸಿದ್ದು, ಆಡಳಿತ ಮಂಡಳಿಯ ಗಮನಕ್ಕೆ ಬಾರದೇ ಸ್ಥಳಾಂತರಿಸುವಂತೆ ಆದೇಶಿಸಿರುವುದು ತಪ್ಪು ಎಲ್ಲವನ್ನೂ ಅಧಿಕಾರಿಗಳೇ ಮಾಡುವುದಾದರೆ ಜನರು ಮತ ನೀಡಿ ನಮ್ಮನ್ನು ಆಯ್ಕೆ ಮಾಡಿರುವುದಾದರೂ ಯಾಕೆ, ಎಲ್ಲವನ್ನೂ ಅವರೇ ನಿರ್ವಹಿಸಲಿ.ನಾವೆಲ್ಲರೂ ರಾಜೀನಾಮೆ ನೀಡಿವುದು ಒಳ್ಳೆಯದು, ಉಪ ಕಾರ್ಯದರ್ಶಿ ಯಾರದ್ದೋ ರಾಜಕೀಯ ಒತ್ತಡಕ್ಕೆ ಒಳಗಾಗಿ ಈ ಆದೇಶ ನೀಡಿದ್ದಾರೆ ಎಂಬ ಅನುಮಾನಗಳು ಮೂಡುತ್ತಿವೆ. ಎಂದು ಸದಸ್ಯ ಪ್ರಸಾದ್ ಶೆಟ್ಟಿ ಸೇರಿದಂತೆ ಇನ್ನಿತರ ಸದಸ್ಯರು   ಸಾಮಾನ್ಯ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

error: Content is protected !!