ಬೆಳ್ತಂಗಡಿ : ಉಜಿರೆಯಿಂದ ಬೆಳ್ತಂಗಡಿ ಕಡೆ ಸಂಚರಿಸುತಿದ್ದ ಕೆಎಸ್ ಆರ್ ಟಿ ಸಿ ಬಸ್ ನ ಹಿಂಬದಿ ಚಕ್ರಗಳು ಕಳಚಿ ಬಿದ್ದ ಘಟನೆ ಮಂಗಳೂರು ವಿಲ್ಲುಪುರಂ ರಾಷ್ಟೀಯ ಹೆದ್ದಾರಿಯ ಟಿ.ಬಿ. ಕ್ರಾಸ್ ಬಳಿ ಜ 30 ರಂದು ನಡೆದಿದೆ.
ಉಜಿರೆಯಿಂದ ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದ ಸರ್ಕಾರಿ ಬಸ್ ನ ಹಿಂಬದಿ ಚಕ್ರಗಳು ಟಿ.ಬಿ. ಕ್ರಾಸ್ ಬಳಿಯ ಹೆದ್ದಾರಿಯಲ್ಲಿ ಕಳಚಿ ಬಿದ್ದಿದೆ. ಹೆದ್ದಾರಿಯ ಕಾಮಗಾರಿ ನಡೆಯುತ್ತಿರುವುದರಿಂದ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದ ಕಾರಣ ಅದೃಷ್ಟವಶಾತ್ ಪ್ರಯಾಣಿಕರು ಸೇರಿದಂತೆ ಯಾರಿಗೂ ಅಪಾಯ ಸಂಭವಿಸಿಲ್ಲ. ನಿನ್ನೆಯಷ್ಟೇ ಮುಂಡಾಜೆ ಬಳಿ ಬಸ್ಸೊಂದು ಚರಂಡಿಗೆ ಬಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದರು.
ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದಾಗಿ ವಾಹನ ಸವಾರರು, ಸಾರ್ವಜನಿಕರು ನಿತ್ಯ ಸಮಸ್ಯೆ ಎದುರಿಸುತಿದ್ದು ಖಾಸಗಿ ವಾಹನಗಳ ಸಮಸ್ಯೆಗಳನನ್ನಂತೂ ಕೇಳುವವರಿಲ್ಲದಂತಾಗಿದೆ.ಅದರೆ ಕಳೆದ ಕೆಲವು ದಿನಗಳಿಂದ ರಸ್ತೆ ಕಾಮಗಾರಿ ತುಸು ವೇಗ ಪಡೆದು ಕೊಂಡಿದ್ದು , ಅದಷ್ಟೂ ಬೇಗ ಕಾಮಗಾರಿ ಪೂರ್ಣ ಗೊಂಡು ಸುಗಮ ಸಂಚಾರಕ್ಕೆ ಹೆದ್ದಾರಿ ಮುಕ್ತವಾಗಲಿ ಎಂಬುವುದೇ ಸಾರ್ವಜನಿಕರ ಒಕ್ಕೊರಲ ಆಗ್ರಹವಾಗಿದೆ.