ಬೆಳ್ತಂಗಡಿ: ಶ್ರೀ ಮಹಮ್ಮಾಯಿ ಅಮ್ಮನವರ ದೇವಸ್ಥಾನ ಅಶ್ವತ್ಥಕಟ್ಟೆ ಪುತ್ರಬೈಲು ಲಾಯಿಲ ಇಲ್ಲಿ ಫೆಬ್ರವರಿ 28 ರಂದು ಮಾರಿಪೋಜೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದಲ್ಲಿ ಜ19 ರಂದು ಬಿಡುಗಡೆಗೊಳಿಸಲಾಯಿತು.
ಜ 28 ರಂದು ಸಂಜೆ 6 ರಿಂದ ಭಕ್ತಿಗಾನ ಯಕ್ಷನೃತ್ಯ ವೈಭವ, 7 ಗಂಟೆಗೆ ಮಹಮ್ಮಾಯಿ ದೇವಿಯ ಭಂಡಾರ ಹೊರಟು ವಿಜೃಂಭಣೆಯಿಂದ ಮಹಮ್ಮಾಯಿ ಹಾಗೂ ಸ್ಥಳ ಸಾನಿಧ್ಯ ಪರಿವಾರ ಶಕ್ತಿಗಳ ಮಾರಿಪೋಜೋತ್ಸವ ನಡೆಯಲಿದೆ. ರಾತ್ರಿ 8 ರಿಂದ ಅನ್ನಸಂತರ್ಪಣೆ, 10ರಿಂದ ಸ್ಥಳೀಯ ಮಕ್ಕಳಿಂದ ಹಾಗೂ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ವೈಭವ,ಕಾರ್ಯಕ್ರಮಗಳು ನಡೆಯಲಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭ ಮಹಮ್ಮಾಯಿ ಸಮಿತಿಯ ಅಧ್ಯಕ್ಷ ಮೋಹನದಾಸ, ಉಪಾಧ್ಯಕ್ಷ ವಿ.ಎಸ್. ಸುರೇಶ್,ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್, ಕಾರ್ಯದರ್ಶಿ ಕೃಷ್ಣಪ್ಪ ಸಿ, ಕೋಶಾಧಿಕಾರಿ ಎಚ್.ಬಿ. ಸೀತಾರಾಮ, ಜೊತೆ ಕೋಶಾಧಿಕಾರಿ . ಸುಂದರ, ಎನ್.ಕೆ.,ಟ್ರಸ್ಟ್ ಕಾರ್ಯದರ್ಶಿ ರಮೇಶ್ ವಿ.ಎಸ್.ಸೇರಿದಂತೆ ವಿವಿಧ ಸಮಿತಿಗಳ ಸದಸ್ಯರುಗಳು ಉಪಸ್ಥಿತರಿದ್ದರು.