ಮಹಾ ಕುಂಭ ಮೇಳ ಸ್ಥಳದ ಬಳಿ ಭಾರೀ ಅಗ್ನಿ ಅನಾಹುತ, ಡೇರೆಗಳಿಗೆ ಬೆಂಕಿ: ಕಾರಣ ನಿಗೂಢ, ಪ್ರಾಣಹಾನಿ ಇಲ್ಲ, ಸ್ಥಳಕ್ಕೆ ಅಗ್ನಿಶಾಮಕ ದಳ, ಎನ್.ಡಿ.ಆರ್.ಎಫ್. ಸಿಬ್ಬಂದಿ ದೌಡು

 

 

 

ಉತ್ತರ ಪ್ರದೇಶ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ಮಹಾಕುಂಭಮೇಳದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಉಡಾಸಿನ್ ಕ್ಯಾಂಪ್ ಪ್ರದೇಶದ ಸೆಕ್ಟರ್ 19ರಲ್ಲಿ ಅನಾಹುತ ನಡೆದಿದೆ. ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ. ಘಟನೆಗೆ ಸ್ಪಷ್ಟ ಕಾರಣ ಲಭಿಸಿಲ್ಲ.

ಘಟನೆ ನಡೆದ ಕೂಡಲೇ ಬೆಂಕಿ ನಂದಿಸಿದ್ದರಿಂದ ಅನಾಹುತ ತಪ್ಪಿದೆ, ಯಾವುದೇ ಪ್ರಾಣಹಾನಿ‌ ಆಗಿಲ್ಲ ಎಂದು ವರದಿಯಾಗಿದೆ. ಪ್ರಾಥಮಿಕ ವರದಿಯ ಪ್ರಕಾರ, ಶಿಬಿರದ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಸ್ಥಳದಲ್ಲಿ ಹಾಕಲಾಗಿದ್ದ ಹಲವಾರು ಡೇರೆಗಳನ್ನು ಅಗ್ನಿ ಆವರಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಅಧಿಕಾರಿಗಳಿಗೆ ಸಹಾಯ ಮಾಡಲು ಎನ್.ಡಿ.ಆರ್.ಎಫ್. ಪಡೆ ಸ್ಥಳಕ್ಕೆ ಆಗಮಿಸಿದೆ.

error: Content is protected !!