ವಿಪರೀತ ಚಳಿ ತಾಳಲಾರದೆ ಬೆಂಕಿ ಹಚ್ಚಿ ಮಲಗಿದ ದಂಪತಿ: ಬೆಳಗಾಗುವಷ್ಟರಲ್ಲಿ ಸಾವು..!: ಬೆಡ್ ಮೇಲೆ ಶವವಾಗಿ ಪತ್ತೆ.!

ಸಾಂಧರ್ಬಿಕ ಚಿತ್ರ

ವಿಪರೀತ ಚಳಿ ತಾಳಲಾರದೆ ಬೆಂಕಿ ಹಚ್ಚಿ ಮಲಗಿದ ದಂಪತಿ ಬೆಳಗಾಗುವಷ್ಟರಲ್ಲಿ ಬೆಡ್ ಮೇಲೆ ಶವವಾಗಿ ಪತ್ತೆಯಾದ ಘಟನೆ ಉತ್ತರಾಖಂಡ್‌ನ ಭಿಲಂಗಾನ ಪ್ರದೇಶದ ದ್ವಾರಿ-ಥಾಪ್ಲಾ ಗ್ರಾಮದಲ್ಲಿ ಸಂಭವಿಸಿದೆ.

ಮೃತ ದಂಪತಿಗಳನ್ನು ಮದನ್ ಮೋಹನ್ ಸೆಮ್ವಾಲ್ (52) ಪತ್ನಿ ಯಶೋದಾ ದೇವಿ (48) ಎಂದು ಗುರುತಿಸಲಾಗಿದೆ.

ಮೋಹನ್ ಮತ್ತು ಯಶೋದಾ ದಂಪತಿ ತಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಗುರುವಾರ ರಾತ್ರಿ ಊಟ ಮಾಡಿ ಮಲಗುವ ವೇಳೆ ಚಳಿ ತಡೆಯಲಾರದೆ ಮಲಗುವ ಕೊಠಡಿಯ ಬದಿಯಲ್ಲಿ ಸಣ್ಣ ಒಲೆ ಇಟ್ಟು ಅದಕ್ಕೆ ಬೆಂಕಿ ಹಾಕಿ ಮಲಗಿದ್ದರು. ಈ ವೇಳೆ ಕೊಠಡಿಯ ಕಿಟಕಿ ಬಾಗಿಲುಗಳನ್ನು ಹಾಕಿದ್ದರಿಂದ ಹೊಗೆ ಹೊರ ಹೋಗದೆ ಕೊಠಡಿಯಲ್ಲೇ ಶೇಖರಣೆಯಾದ ಪರಿಣಾಮ ದಂಪತಿ ಮಧ್ಯ ರಾತ್ರಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮರುದಿನ ಬೆಳಗ್ಗೆ ಮಗ ಅಪ್ಪ – ಅಮ್ಮನನ್ನು ಎಬ್ಬಿಸಲು ಹೋದಾಗ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ ಆತಂಕಗೊಂಡ ಮಗ ಮನೆಯ ಇತರ ಸದಸ್ಯರ ಬಳಿ ಮಾಹಿತಿ ನೀಡಿದ್ದಾನೆ. ಬಳಿಕ ಮನೆಯ ಸದಸ್ಯರು ಬಂದು ಕರೆದಾಗಲೂ ಯಾವುದೇ ಪ್ರತಿಕ್ರಿಯೆ ಬರದೇ ಇದ್ದಾಗ ಬಾಗಿಲು ಮುರಿದು ಒಳ ಪ್ರವೇಶಿಸಿದ ವೇಳೆ ದಂಪತಿ ಬೆಡ್ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ.

error: Content is protected !!