ಪ್ರೇಮ ವೈಫಲ್ಯ: ಆತ್ಮಹತ್ಯೆಗೆ ಶರಣಾದ ಯುವಕ: ಯುವತಿಗೆ ಮದುವೆಯಾಗಿದ್ದರೂ ಮರೆತಿರಲಿಲ್ಲ ಬಾಲ್ಯದ ಪ್ರೀತಿ: ಸೆಲ್ಫಿ ವಿಡಿಯೋದಲ್ಲಿ ದುಃಖವನ್ನು ಹಂಚಿಕೊಂಡ ಲವರ್ ಬಾಯ್

ಅವರಿಬ್ಬರದ್ದೂ ಬಾಲ್ಯದಿಂದಲೇ ಹುಟ್ಟಿಕೊಂಡ ಪ್ರೀತಿಯಂತೆ. ಜೊತೆಯಾಗಿ ಬೆಳೆದವರು, ಜೊತೆಯಾಗಿ ಓಡಾಡಿ ದವರು. ಮದುವೆಯ ವಯಸ್ಸಿನವರೆಗೂ ಅವರಿಬ್ಬರ ಪ್ರೀತಿ, ಪ್ರಣಯ ಮುಂದುವರಿದಿತ್ತು. ಆದರೆ ಯುವತಿಯ ಮನೆಯವರು ಆ ಪ್ರೀತಿಗೆ ಮುಳ್ಳಾದರು. ನಿಜ ಪ್ರೇಮಿ ಸಾವಿಗೆ ಶರಣಾದ…

ಅವನು, ಮೈಸೂರಿನ ಮೇಗಳಾಪುರದ ವಿನಯ್. ಬಾಲ್ಯದಿಂದ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ. ಆಕೆಯೂ ವಿನಯ್‌ನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಪ್ರೇಮ ಲೋಕದಲ್ಲಿ ಮುಳುಗಿ ಹೋಗಿದ್ರು. ಈ ಪ್ರೀತಿ ಯುವತಿ ಮನೆಯವರಿಗೆ ಹಿಡಿಸದೇ ಯುವತಿಗೆ ಬೇರೆ ಹುಡುಗನ ಜೊತೆ ಮದುವೆ ಮಾಡುವ ಯೋಚನೆ ಮಾಡಿದ್ರು.

ಮದುವೆಯಾದ ಮೇಲೆ ಎಲ್ಲಾ ಸರಿಯಾಗುತ್ತೇ ಅಂದುಕೊಂಡಿದ್ದ ಯುವತಿ ಮನೆಯವರ ಲೆಕ್ಕಾಚಾರ ತಪ್ಪಾಯ್ತು. ಆ ಯುವತಿ ಮದುವೆಯ ಬಳಿಕವೂ ವಿನಯ್ ಜೊತೆ ಸಂಪರ್ಕ ಮುಂದುವರಿಸಿದ್ದು, ಇಬ್ಬರು ಹಾಯಾಗಿ ಸುತ್ತಾಡಿಕೊಂಡಿದ್ದರು. ಸಾಲದಕ್ಕೆ ಎರಡ್ಮೂರು ಬಾರಿ ಆಕೆ ಮನೆ ಬಿಟ್ಟು ವಿನಯ್ ಜೊತೆ ಹೋಗಿದ್ದಳು. ಬಳಿಕ ಮನೆಯವರು ಹುಡುಕಿ ಕರೆದುಕೊಂಡು ಬಂದಿದ್ದರು. ಈ ಸಂಬಂಧ ಪೊಲೀಸ್ ಠಾಣೆಗೂ ದೂರು ನೀಡಿದ್ದರು.

ಜ.16ರಂದು ಈ ವಿಚಾರವಾಗಿ ರಾಜಿ ಪಂಚಾಯತಿಯಾಗಿದ್ದು, ಇದು ವಿನಯ್‌ಗೆ ಅವಮಾನವಾಗಿತ್ತು. ಆ ಯುವತಿ ಕೂಡ ನಾನು ನನ್ನ ಪತಿ ಜೊತೆ ಹೋಗುವುದಾಗಿ ಹೇಳಿದ್ದಳು. ಇದು ಸಹಜವಾಗಿ ವಿನಯ್ ಅಸಮಾಧಾನಕ್ಕೆ ಕಾರಣವಾಗಿತ್ತು. ಬಳಿಕ ಆಕೆಯನ್ನು ಸಂಪರ್ಕಿಸಲು ವಿನಯ್ ಸಾಕಷ್ಟು ಪ್ರಯತ್ನಿಸಿದ್ದಾನೆ. ಆದ್ರೆ ಪ್ರಯೋಜನವಾಗಿಲ್ಲ. ಇದರಿಂದ ಮನನೊಂದ ವಿನಯ್, ಮೇಗಳಾಪುರದ ತನ್ನ ಸಹೋದರಿಯ ಮನೆಗೆ ಹೋಗಿ ನೇಣಿಗೆ ಶರಣಾಗಿದ್ದಾನೆ.

ಸಾಯುವ ಮುನ್ನ ಸೆಲ್ಫಿ ವಿಡಿಯೋ ಮಾಡಿ ತನ್ನ ದುಃಖವನ್ನು ಹಂಚಿಕೊಂಡಿದ್ದು, ಯುವಕನ ಸಾವಿಗೆ ಯುವತಿಯ ಮನೆಯವರೇ ಕಾರಣ ಎಂದು ವಿನಯ್ ಮನೆಯವರು ಆರೋಪ ಮಾಡಿದ್ದಾರೆ. ಯುವತಿಯ ಮನೆಯವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂಬಂಧ ಇಲವಾಲ ಪೊಲೀಸ್ ಠಾಣೆಗೆ ವಿನಯ್ ಸಂಬAಧಿಕರು ದೂರು ನೀಡಿದ್ದಾರೆ.

error: Content is protected !!