ಬೆಂಗಳೂರು ವಿಮಾನ ನಿಲ್ದಾಣದಲ್ಲಿ 23 ಕೋಟಿ ರೂ. ಮೌಲ್ಯದ ಗಾಂಜಾ ಪತ್ತೆ: ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳಿಂದ ಗಾಂಜಾ ಸೀಜ್: ಮೂವರು ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 23 ಕೋಟಿ ರೂ. ಮೌಲ್ಯದ ಗಾಂಜಾ ಪತ್ತೆಯಾಗಿದೆ.

ಏರ್ಪೋರ್ಟ್​​ನಲ್ಲಿ  ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ಮಾಡುವ ವೇಳೆ, ಪ್ರತ್ಯೇಕ ಕವರ್‌ಗಳಲ್ಲಿ ಪ್ಯಾಕ್ ಮಾಡಿಕೊಂಡು ಲಗೇಜ್ ಬ್ಯಾಗ್‌ನಲ್ಲಿ ಇಟ್ಟಿಕೊಂಡು ಅಕ್ರಮವಾಗಿ ಗಾಂಜಾ ಸಾಗಿಸುತ್ತಿರುವುದು ಪತ್ತೆಯಾಗಿದ್ದು, ಗಾಂಜಾ ಸಮೇತ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಬ್ಯಾಂಕಾಕ್​ನಿಂದ ಬೆಂಗಳೂರಿಗೆ ಬಂದಿದ್ದ ಹೈಡ್ರೋಪೋನಿಕ್ಸ್ ಗಾಂಜಾ, ಮೈರವಾನ್ ಗಾಂಜಾ ಹೂ ಸೇರಿದಂತೆ ವಿವಿಧ ಬಗೆಯ 23 ಕೋಟಿ ರೂ. ಮೌಲ್ಯದ 23 ಕೆಜಿ ಗಾಂಜಾ ವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಮೇಲೆ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಈ ಗಾಂಜಾವನ್ನು ಪ್ರತಿಷ್ಠಿತ ಶಾಲಾ ಕಾಲೇಜು ಹಾಗೂ ಪಾರ್ಟಿಗಳು ನಡೆಯುವ ಜಾಗಗಳಿಗೆ ತಲುಪಿಸಲು ತರಲಾಗಿತ್ತು ಎಂದು ಹೇಳಲಾಗುತ್ತಿದ್ದು, ಶ್ರೀಮಂತರು ಹೆಚ್ಚಾಗಿ ಬಳಸುವ ಗಾಂಜಾ ಇದಾಗಿದೆ.

ಒಟ್ಟಾರೆ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಡ್ರಗ್ಸ್ ಜೊತೆಗೆ ವಿದೇಶದಿಂದ ಹೆಚ್ಚು ಬೆಲೆ ಬಾಳುವ ಗಾಂಜಾದಂತಹ  ಮಾದಕ ವಸ್ತುಗಳ ಸಾಗಾಣಿಕೆ ಮಾಡಲು ಯತ್ನಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಈ ಗಾಂಜಾವನ್ನು ಎಲ್ಲಿಗೆ ಪೂರೈಸಲು ತರಲಾಗಿತ್ತು? ಯಾರಿಗೆ ಕೊಡಲು ತಂದಿದ್ದರು ಎಂಬುದನ್ನು ಇನ್ನಷ್ಟೇ ಅಧಿಕಾರಿಗಳು ತನಿಖೆ ನಡೆಸಿ ಪತ್ತೆ ಹಚ್ಚಬೇಕಿದೆ.

error: Content is protected !!