ಭರತನಾಟ್ಯ ಜೂನಿಯರ್ ಪರೀಕ್ಷೆ: ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಆಕಾಂಕ್ಷ.ಎಲ್

 

ಬೆಳ್ತಂಗಡಿ: ಕರ್ನಾಟಕ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ನೃತ್ಯ ಪರಿಕರಿಗಳ ವಿಶ್ವವಿದ್ಯಾಲಯ ಮೈಸೂರು ಇಲ್ಲಿ ನಡೆದ 2024ನೇ ಸಾಲಿನ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಅನುಗ್ರಹ ಇಂಗ್ಲೀಷ್ ಮೀಡಿಯಂ ಶಾಲೆಯ 7 ನೇ ತರಗತಿ ವಿದ್ಯಾರ್ಥಿ ಆಕಾಂಕ್ಷ.ಎಲ್ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಉಜಿರೆಯ ಅಳಿಕೆ ನಿವಾಸಿ ಲಕ್ಷ್ಮಣ್  ಕುಮಾರ್ ಹಾಗೂ ಸ್ವಾತಿ  ಲಕ್ಷ್ಮಣ್ ಅವರ  ಪುತ್ರಿಯಾಗಿರುವ ಇವರು ವಿದುಷಿ ಶ್ರೀಮತಿ ಸ್ವಾತಿ ಜಯರಾಮ್ ಮತ್ತು ವಿದುಷಿ ಶ್ರೀಮತಿ ಪೃಥ್ವಿ ಸತೀಶ್, ಶ್ರೀ ದೇವಿಕಿರಣ್ ಕಲಾನಿಕೇತನ ಉಜಿರೆ ಇವರ ಶಿಷ್ಯೆಯಾಗಿದ್ದಾರೆ.

error: Content is protected !!