‘ಜೈ’ ಸಿನಿಮಾದ ಸಬ್ಜೆಕ್ಟ್ ಇಂಟ್ರೆಸ್ಟಿಂಗ್: ಈ ಸಿನಿಮಾ ಮಾಡಲೇಬೇಕು ಎಂದನಿಸಿತು” ಬಾಲಿವುಡ್ ಸೂಪರ್ ಸ್ಟಾರ್ ಸುನೀಲ್ ಶೆಟ್ಟಿ

ಮಂಗಳೂರು: ಬಾಲಿವುಡ್ ಸಿನಿಮಾಗಳಲ್ಲಿ ಸೂಪರ್ ಸ್ಟಾರ್ ಸುನೀಲ್ ಶೆಟ್ಟಿ ಅವರನ್ನು ನೋಡುವಾಗ ಇವರು ತುಳುನಾಡಿನ ನಟ ಅನ್ನೋ ಹೆಮ್ಮೆ ತುಳುವರಿಗೆ. ಆದರೆ ಈಗ ಅವರು ತುಳು ಸಿನಿಮಾದಲ್ಲೇ ನಟಿಸಲು ಮುಂದಾಗಿದ್ದು ರೂಪೇಶ್ ಶೆಟ್ಟಿ ಅವರ ಮುಂದಿನ ಸಿನಿಮಾಗೆ ಹೆಚ್ಚು ಬಲ  ಸಿಕ್ಕಂತಾಗಿದೆ.

ಕರಾವಳಿ ಪ್ರತಿಭೆ ರೂಪೇಶ್ ಶೆಟ್ಟಿ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ‘ಜೈ’ ಸಿನಿಮಾದಲ್ಲಿ ಸುನೀಲ್ ಶಟ್ಟಿ ಕೂಡಾ ಪ್ರಮುಖ ಪಾತ್ರ ವಹಿಸಿದ್ದಾರೆ. ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಸಲುವಾಗಿ ಶೆಟ್ಟಿ ಮಂಗಳವಾರದಂದು  ಮಂಗಳೂರಿಗೆ ಆಗಮಿದ್ದಾರೆ.

ಸಿನಿಮಾದ ಬಗ್ಗೆ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, “ನನ್ನ ಮೊದಲ ತುಳು ಚಿತ್ರ. ಬಹಳ ಖುಷಿ ಆಗುತ್ತಿದೆ. ತುಳು ಸಿನಿಮಾ ಮಾಡಬೇಕು ಎಂದುಕೊAಡಿದ್ದೆ. ತುಳು ಸಿನಿಮಾಗಳಲ್ಲಿ ಬಹಳ ಬೆಳವಣಿಗೆ ಆಗಿದೆ. ಜೈ ಸಿನಿಮಾ ಬಗ್ಗೆ ರೂಪೇಶ್ ತಿಳಿಸಿದರು. ಸಬ್ಜೆಕ್ಟ್ ಕೇಳಿದಾಗ ಈ ಸಿನಿಮಾ ಮಾಡಲೇಬೇಕು ಎಂದನಿಸಿತು” ಎಂದು ತುಳು ಭಾಷೆಯಲ್ಲೇ ತಿಳಿಸಿದ್ದಾರೆ.

“ನಾವು ತುಳುನಾಡಿನವರು ಎಂದು ಮಾತು ಮುಂದುವರಿಸಿದ ಅವರು, ಎಂದೆಂದಿಗೂ ಅಮ್ಮನ ಆಶೀರ್ವಾದ ಇದೆ. ವರ್ಷ ವರ್ಷವೂ ಬಪ್ಪನಾಡಿಗೆ ಬರುತ್ತೇನೆ. ಧರ್ಮಸ್ಥಳ, ಸುಬ್ರಹ್ಮಣ್ಯ ಸೇರಿ ಎಲ್ಲಾ ಕಡೆಗೂ ಭೇಟಿ ಕೊಡುತ್ತಿರುತ್ತೇನೆ. ಇವತ್ತು ಇಲ್ಲಿ ಬಂದು ಸಿನಿಮಾ ಮಾಡುತ್ತಿರುವುದು ಬಹಳ ಖುಷಿಯ ವಿಷಯ. ಹಾಗೇ ಹೆಮ್ಮೆಯ ಕ್ಷಣ. ತುಳುನಾಡು ಬಹಳ ಚಿಕ್ಕ ಜಾಗ. ಅದಾಗ್ಯೂ, ಬೆಳವಣಿಗೆಗಳು ನಡೆಯುತ್ತಿವೆ. ಒಳ್ಳೊಳ್ಳೆ ಸಬ್ಜೆಕ್ಟ್ನ ಸಿನಿಮಾ ಬರುತ್ತಿವೆ. ನಾನು ಈ ಸಿನಿಮಾದ ಭಾಗವಾಗಿದ್ದು, ರೂಪೇಶ್‌ಗೆ ಧನ್ಯವಾದಗಳು” ಎಂದಿದ್ದಾರೆ.

error: Content is protected !!