ಸಾಂದರ್ಭಿಕ ಚಿತ್ರ
ಸ್ವಂತ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಪತಿಯನ್ನು ಇಬ್ಬರು ಪತ್ನಿಯರು ಸೇರಿ ಕೊಲೆಗೈದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಕೊಲೆಯಾದ 43 ವ್ಯಕ್ತಿಗೆ ಮೊದಲ ವಿವಾಹವಾಗಿ ಇಬ್ಬರು ಹೆಣ್ಣು ಮಕ್ಕಳು ಇದ್ದರು. ಬಳಿಕ ಗಂಡು ಮಗುವಿನ ಮೋಹದಲ್ಲಿ ತನ್ನ ಪತ್ನಿಯ ತಂಗಿಯನ್ನೂ ಮದುವೆಯಾಗಿದ್ದಾನೆ. ಆಕೆಗೆ ಗಂಡು ಮಗು ಜನಿಸಿದ್ದು, ಎಲ್ಲರೂ ಒಂದೇ ಕುಟುಂಬದಲ್ಲಿ ಒಟ್ಟಿಗೆ ನೆಲೆಸಿದ್ದರು.
ಕೆಲವು ತಿಂಗಳ ಹಿಂದೆ ತನ್ನ ಮೊದಲ ಪತ್ನಿಯ ಕಿರಿ ಮಗಳು ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು. ಹಿರಿ ಮಗಳು ಹೈದರಾಬಾದ್‌ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ. ಕಿರಿ ಮಗಳ ಸಾವಿನ ನಂತರ ಆರೋಪಿ ಮದ್ಯದ ಚಟಕ್ಕೆ ದಾಸನಾಗಿದ್ದ. ಅಂದಿನಿAದ ಆತನ ನಡವಳಿಕೆ ಬದಲಾಗಿ ಇಬ್ಬರು ಪತ್ನಿಯರಿಗೆ ಮಾನಸಿಕ, ದೈಹಿಕ ಹಿಂಸೆ ನೀಡಲು ಪ್ರಾರಂಭಿಸಿದ. ಇದರಿಂದ ಪತ್ನಿಯರು ಸಾಕಷ್ಟು ಮನನೊಂದಿದ್ದರು. ಅಲ್ಲದೆ ಹಿರಿ ಮಗಳ ಜೊತೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ.
ಸಂಕ್ರಾAತಿ ಹಬ್ಬಕ್ಕೆ ಸಿಕ್ಕ ರಜೆಯ ಕಾರಣ ಮಗಳು ಊರಿಗೆ ಬಂದಿದ್ದಳು. ಹೀಗೆ ಬಂದ ಮಗಳೊಂದಿಗೆ ತಂದೆ ಅನುಚಿತವಾಗಿ ವರ್ತಿಸಲು ಶುರು ಮಾಡಿದ್ದಾನೆ. ಇದು ತಪ್ಪು, ನಿಮ್ಮ ನಡವಳಿಕೆ ಬದಲಾಯಿಸಿಕೊಳ್ಳಿ ಎಂದು ಪತ್ನಿಯರು ಅಂಗಲಾಚಿ ಬೇಡಿಕೊಂಡರೂ ಆರೋಪಿ ನಿರ್ಲಕ್ಷಿಸಿದ್ದಾನೆ. ಇದರಿಂದ ಬೇಸರಗೊಂಡು ಒಂದು ದಿನ ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಆಲೋಚಿಸಿದ್ದರು.
ಆದರೆ ಅದೇ ರಾತ್ರಿ ಪತಿ ತನ್ನ ಮಗಳೊಂದಿಗೆ ಮತ್ತೆ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದ. ಇದರಿಂದ ಕೋಪಗೊಂಡ ಇಬ್ಬರು ಪತ್ನಿಯರು ಪತಿಯ ಮರ್ಮಾಂಗಕ್ಕೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ.
ಪೊಲೀಸರು ಘಟನೆ ಸ್ಥಳಕ್ಕೆ ದೌಡಾಯಿಸಿ ಪ್ರಾಥಮಿಕ ಮಾಹಿತಿ ಸಂಗ್ರಹಿಸಿ ತನಿಖೆ ಕೈಗೊಂಡಿದ್ದಾರೆ. ಮೃತನ ಸಹೋದರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ ಎಂದು ಸಬ್ ಇನ್ಸ್ಪೆಕ್ಟರ್ ವಿ. ಮಹೇಶ್ ತಿಳಿಸಿದ್ದಾರೆ.