ಅತ್ಯಾಚಾರವೆಸಗಲು ಬಂದ ವ್ಯಕ್ತಿಯನ್ನು ಒದ್ದು ಕೊಂದ ಹಸು..!: ಕಾಂಡೋಮ್ ಧರಿಸಿ ಹಸುವಿನ ಪಕ್ಕದಲ್ಲಿ ಬಿದ್ದಿದ್ದ ವ್ಯಕ್ತಿ..!

ಸಾಂದರ್ಭಿಕ ಚಿತ್ರ

ಅತ್ಯಾಚಾರವೆಸಗಲು ಬಂದ ವ್ಯಕ್ತಿಯನ್ನು ಹಸುವೆ ಒದ್ದು ಕೊಂದ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಕೃಷಿ ಕಾರ್ಮಿಕನಾಗಿದ್ದ ವ್ಯಕ್ತಿಯೋರ್ವ ಬೆಳಿಗ್ಗೆ 5 ಗಂಟೆಗೆ ಹಾಲು ಕರೆಯಲು ಎದ್ದಿದ್ದ. ಮಾಲೀಕನಿಗೆ ಕಾಫಿಗಾಗಿ ಹಾಲು ತೆಗೆದುಕೊಂಡು ಹೋಗುತ್ತಿದ್ದವನು ಅಂದು ಬಂದಿರಲಿಲ್ಲ. ಬಳಿಕ ಸಹೋದ್ಯೋಗಿ ಸ್ಥಳಕ್ಕೆ ಹೋಗಿ ನೋಡಿದಾಗ ಹಸುವಿನ ಪಕ್ಕದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ.

ಮೃತ ವ್ಯಕ್ತಿ ಕಾಂಡೋಮ್ ಧರಿಸಿದ್ದ ಎಂದು ಸಹೋದ್ಯೋಗಿ ಹೇಳಿದ್ದು, ಆತನನ್ನು ಆ ಸ್ಥಳದಿಂದ ಬೇರೆಡೆಗೆ ಕರೆದೊಯ್ಯಲು ಪ್ರಯತ್ನಿಸಿದ್ದ. ಬಳಿಕ ವೈದ್ಯರು ಸ್ಥಳಕ್ಕಾಗಮಿಸಿ ಆತನನ್ನು ಎಬ್ಬಿಸಲು ಪ್ರಯತ್ನಿಸಿದ್ದು, ಆತ ಹೃದಯಸ್ತಂಭನಕ್ಕೆ ಒಳಗಾಗಿ ಸಾವನ್ನಪ್ಪಿರಬಹುದು ಎಂದು ಹೇಳಿದ್ದಾರೆ.

error: Content is protected !!