ಗೂಗಲ್ ಮ್ಯಾಪ್ ಲೋಕೇಶ್ ನಂಬಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು, ಪೂರ್ಣವಾಗದ ಸೇತುವೆ ಮೇಲೆ ಚಲಿಸಿ, ನದಿಗೆ ಬಿದ್ದು ಸಾವಪ್ಪನ್ನಪಿದ ಘಟನೆ ಇತ್ತೀಚಿಗೆ ನಡೆದಿತ್ತು. ಅಂತದ್ದೇ ಮತ್ತೊಂದು ಘಟನೆ ಸಂಭವಿಸಿದ್ದು ಪೊಲೀಸರು ಪೇಚೆಗೆ ಸಿಲುಕಿದ್ದಾರೆ.
ಆರೋಪಿಯೊಬ್ಬನ ಸೆರೆಗಾಗಿ ತೆರಳಿದ್ದ 16 ಪೊಲೀಸರ ತಂಡವನ್ನು ಗೂಗಲ್ ಮ್ಯಾಪ್ ನಂಬಿ ಪ್ರಯಾಣಿಸುತ್ತಿದ್ದರು. ಈ ವೇಳೆ ದಿಕ್ಕು ತಪ್ಪಿ, ಗಡಿ ದಾಟಿ ನಾಗಾಲ್ಯಾಂಡ್‌ನ ಗ್ರಾಮವೊಂದಕ್ಕೆ ತಲುಪಿದ್ದಾರೆ. ಪೊಲೀಸ್ ತಂಡವನ್ನು ದುಷ್ಕರ್ಮಿಗಳೆಂದು ಭಾವಿಸಿದ ಗ್ರಾಮಸ್ಥರು ಅವರ ಮೇಲೆ ದಾಳಿ ನಡೆಸಿ ಸೆರೆ ಹಿಡಿದಿದ್ದರು.
ಘಟನೆಯಲ್ಲಿ ಓರ್ವ ಪೊಲೀಸ್ ಸಿಬಂದಿಗೆ ಗಾಯವಾಗಿದೆ ಎಂದು ಅಸ್ಸಾಂ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸುದ್ದಿ ತಿಳಿದುಬರುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಸ್ಸಾಂ ಪೊಲೀಸರು ಸಹೋದ್ಯೋಗಿಗಳನ್ನು ಬಿಡುಗಡೆ ಮಾಡಿಸಿದ್ದಾರೆ.