ಬೆಳ್ತಂಗಡಿ: ಸಾರ್ವಜನಿಕ ರುದ್ರಭೂಮಿ ನಿರ್ಮಾಣಕ್ಕೆ ಶಿಲಾನ್ಯಾಸ

ಬೆಳ್ತಂಗಡಿ: ಅಮೃತ ನಗರೋತ್ಥಾನ ಹಂತ 4ರಲ್ಲಿ, ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕ ರುದ್ರಭೂಮಿ ನಿರ್ಮಾಣಕ್ಕಾಗಿ ಜ.08ರಂದು ಶಿಲಾನ್ಯಾಸ ನೆರವೇರಿತು.
ಬೆಳ್ತಂಗಡಿ ತಾಲೂಕು ಕ್ರೀಡಾಂಗಣದ ಬಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಅವರು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್, ಮುಖ್ಯಾಧಿಕಾರಿ ರಾಜೇಶ್, ಕೆ.ಸದಸ್ಯರುಗಳಾದ ಜಗದೀಶ್ , ಲೋಕೇಶ್, ರಜನಿ ಕುಡ್ವ, ಉದ್ಯಮಿ ರಾಜೇಶ್ ಪ್ರಭು ಸೇರಿದಂತೆ ಇನ್ನಿತರರು ಇದ್ದರು.

error: Content is protected !!