ಸಂಸ್ಕಾರ ಭಾರತಿ (ರಿ.) ಮಂಗಳೂರು, ಬೆಳ್ತಂಗಡಿ ತಾಲೂಕು: ಜ. 12ರಂದು “ಸಾವಿರದ ಸಾಧಕರು” ಮನೆಮನದ ಸಮ್ಮಾನ ಮಹಾಅಭಿಯಾನ ಆರಂಭ

 

ಬೆಳ್ತಂಗಡಿ: ಸಂಸ್ಕಾರ ಭಾರತಿ (ರಿ.) ಮಂಗಳೂರು, ಬೆಳ್ತಂಗಡಿ ತಾಲೂಕು ವತಿಯಿಂದ ಜ.12ರಂದು “ಸಾವಿರದ ಸಾಧಕರು” ಮನೆಮನದ ಸಮ್ಮಾನ ಮಹಾ ಅಭಿಯಾನ ಆರಂಭವಾಗಲಿದೆ ಎಂದು ಅಧ್ಯಕ್ಷರಾದ ಸಂಪತ್ ಬಿ. ಸುವರ್ಣ ಅವರು ಹೇಳಿದ್ದಾರೆ.

ಜ.08 ರಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಮೌನಕ್ರಾಂತಿ ಸಾಧಿಸುತ್ತ, ಸದ್ದಿಲ್ಲದೆ ಸುದ್ದಿ ಮಾಡುತ್ತಿರುವ ಶ್ರೇಷ್ಠ ಸಾಧಕರ ಅನ್ವೇಷಣೆ ಮಾಡುತ್ತಾ, ಪ್ರತೀ ಗ್ರಾಮದ ಸಾಧಕ ಬಂಧುಗಳ ಮನೆಗೆ ಭೇಟಿ ನೀಡಿ ಅವರಿಗೆ ‘ಬೆಳ್ತಂಗಡಿ ಬೆಳಕು ಪ್ರಶಸ್ತಿ’ ನೀಡಿ ಸನ್ಮಾನಿಸುವ ಕಾರ್ಯಕ್ರಮ ಇದಾಗಿದೆ.

ಜ.12ರ ಸ್ವಾಮಿ ವಿವೇಕಾನಂದರ ಜನ್ಮದಿನದಂದು ಚಾಲನೆ ಬೆಳ್ಗಗೆ 10 ಗಂಟೆಗೆ ಮುಂಡಾಜೆಯ ಸನ್ಯಾಸಿಕಟ್ಟೆ ಪರಶುರಾಮ ಕ್ಷೇತ್ರದಲ್ಲಿ  ರಾಷ್ಟ್ರೀಯ ಸ್ವಯಂ ಸೇವಾ ಸಂಘ ತಾಲೂಕು ಸಂಪರ್ಕ ಪ್ರಮುಖ್ ಶಿವಪ್ರಸಾದ್ ಸುರ್ಯ ಅಭಿಯಾನವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ವಾಸುದೇವ ಗೋಖಲೆ ಅಧ್ಯಕ್ಷರು, ಆಡಳಿತ ಮಂಡಳಿ, ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನ ಮುಂಡಾಜೆ ಭಾಗವಹಿಸಲಿದ್ದಾರೆ ಎಂದರು.

error: Content is protected !!