ಮಗುವಿನ ತುರ್ತು ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಿದ ಅಂಬ್ಯುಲೆನ್ಸ್: ಉಜಿರೆಯಿಂದ ಮುಂದಕ್ಕೆ ಸಾಗಿದ ಈಶ್ವರ್ ಮಲ್ಪೆ ಅಂಬ್ಯುಲೆನ್ಸ್ :

 

 

 

ಬೆಳ್ತಂಗಡಿ:,,ಮಗುವನ್ನು  ತುರ್ತು ಚಿಕಿತ್ಸೆಗಾಗಿ ಮಣಿಪಾಲದಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಈಶ್ವರ್ ಮಲ್ಪೆ ಅವರ ಅಂಬ್ಯುಲೆನ್ಸ್ ನಲ್ಲಿ‌ ಕೊಂಡು ಹೋಗಲಾಗುತಿದ್ದು ಬೆಳ್ತಂಗಡಿ ತಾಲೂಕಿನ ಉಜಿರೆಯಿಂದ ಮುಂದಕ್ಕೆ ಈಗಾಗಲೇ ಸಾಗಿದೆ. ತುರ್ತು ಸಂಚಾರ ಮಾಡಬೇಕಾಗಿರುವುದರಿಂದ ಝೀರೋ ಟ್ರಾಫಿಕ್ ಅವಶ್ಯಕತೆ ಇದ್ದು, ತಾಲೂಕಿನ ವಾಹನ ಸವಾರರಲ್ಲಿ ಸಹಕಾರ ನೀಡುವಂತೆ ಈಶ್ವರ್ ಮಲ್ಪೆ ವಿನಂತಿಸಿಕೊಂಡಿದ್ದು, ಇದಕ್ಕೆ ಸವಾರರು ಸಹಕಾರ ನೀಡುತಿದ್ದಾರೆ.

 

 

 

 

ಸೋಮಂತಡ್ಕ, ಕಕ್ಕಿಂಜೆ, ಚಾರ್ಮಾಡಿ ಮೂಲಕ ಅಂಬ್ಯುಲೆನ್ಸ್ ಸಂಚಾರ ಮಾಡಲಿದೆ. ಅದ್ದರಿಂದ ಈ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನ ಸವಾರರು ಅಂಬ್ಯುಲೆನ್ಸ್ ಸಂಚಾರಕ್ಕೆ ತೊಂದರೆ ಆಗದಂತೆ ದಾರಿ ಬಿಟ್ಟುಕೊಡುವ ಮೂಲಕ ಮಗುವಿನ ತುರ್ತು ಚಿಕಿತ್ಸೆಗೆ ಸ್ಪಂದಿಸಬೇಕಾಗಿ ನಮ್ಮ ವಿನಂತಿಯಾಗಿದೆ. ಈಶ್ವರ್ ಮಲ್ಪೆ ಸೇವಾ ಅಂಬ್ಯುಲೆನ್ಸ್ ನೊಂದಿಗೆ ಇತರ ನಾಲ್ಕು ಅಂಬ್ಯುಲೆನ್ಸ್ ಸಾಥ್ ನೀಡುತ್ತಿವೆ.

error: Content is protected !!