“ಶಬರಿ ಮಲೆ ಅಯ್ಯಪ್ಪ ಕ್ಷೇತ್ರ ಮಹಾತ್ಮೆ” ಪ್ರಸಂಗದಲ್ಲಿ ‘ವಾವರ’ ಎಂಬ ಪಾತ್ರದ ಬಗ್ಗೆ ಇತ್ತೀಚೆಗೆ ಆಕ್ಷೇಪ ಕೇಳಿ ಬಂದಿತ್ತು. ಈ ವಿವಾದದ ಬೆನ್ನಲ್ಲೇ ಕಲಾಪೋಷಕ ಶಶಿಧರ ಶೆಟ್ಟಿಯವರು ವಾವರ ಪಾತ್ರವನ್ನು ಪ್ರದರ್ಶನ ಮಾಡುವ ಕುರಿತು ಅಸಮಧಾನ ವ್ಯಕ್ತಪಡಿಸಿದರು. ಈ ಬೆನ್ನಲ್ಲೆ ವಾವರ ಪಾತ್ರವನ್ನು ಕೈಬಿಡೋದಾಗಿ ಮೇಳಗಳು ಭರವಸೆ ನೀಡಿದೆ.
ಗುರುವಾಯನಕೆರೆ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಬರೋಡ ಅವರು ಯಕ್ಷಗಾನ ಬಯಲಾಟಗಳಲ್ಲಿ ಶಬರಿ ಮಲೆ ಅಯ್ಯಪ್ಪ ಪ್ರಸಂಗದಲ್ಲಿ ವಾವರ ಎಂಬ ಅನ್ಯ ಮತೀಯ ದರೋಡೆಕೋರನ ಪಾತ್ರವನ್ನು ದೈವತ್ವಕ್ಕೆ ಏರಿಸುವ ಹಾಗೂ ವಾವರ ಪೂಜೆ ಕುರಿತು ಆಕ್ಷೇಪ ಎತ್ತಿದ್ದರು, ಯಕಗಾನದ ಹಾಸ್ಯ ರಸೋತ್ಪತ್ತಿಗಾಗಿ ಪ್ರಸಂಗ ಕರ್ತರು ವಿದೂಷಕ ಪಾತ್ರವನ್ನು ಸೃಷ್ಟಿಸಿದ್ದು ಇದನ್ನು ಇತ್ತೀಚೆಗೆ ಅಯ್ಯಪ್ಪವೃತಧಾರಿಗಳು ಅನುಸರಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಶಬರಿಮಲೆ ಯಾತ್ರೆಗೆ ಹೋಗುವವರು ಪೂರ್ವದಲ್ಲಿ ವಾವರನ ನೆನಪಿಗೆ ಅಲ್ಲಿನ ಮಸೀದಿಗೆ ಹೋಗುವುದು ತೆಂಗಿನಕಾಯಿ, ಕಾಳುಮೆಣಸು ಕೊಡುವುದು, ದಕ್ಷಿಣೆ ಹಾಕುವುದು ತಪ್ಪು. ಇದು ಯಾವ ಪುರಾಣದಲ್ಲೂ ಇಲ್ಲ ಧರ್ಮ ಗ್ರಂಥಗಳಲ್ಲೂ ಇಲ್ಲ, ಇತಿಹಾಸವೂ ಇಲ್ಲ. ಇದು ಹಿಂದೂ ಸನಾತನ ಧರ್ಮಕ್ಕೆ ಅಪಚಾರ ಮಾಡಿದಂತಾಗುತ್ತದೆ. ವೃತಧಾರಿಗಳು ವಾವರ ಮತ್ತು ಅಯ್ಯಪ್ಪ ದೇವರು ಮೈಮೇಲೆ ಬಂದು ಯುದ್ಧ ಸನ್ನಿವೇಶದ ದರ್ಶನವನ್ನು ಮಾಡಬಾರದು, ಅದೇ ರೀತಿ ಶಬರಿಮಲೆ ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ವಾವರ ಪಾತ್ರ ಮಾಡಬಾರದು ಎಂದು ಮೇಳದ ಯಜಮಾನರುಗಳಿಗೆ ಮನವಿ ಮಾಡಿದ್ದರು.
ಇವರ ಮನವಿಯ ಬೆನ್ನಲ್ಲೆ ಗೆಜ್ಜೆಗಿರಿ ಮೇಳ, ಕಿಶನ್ ಹೆಗ್ಡೆ ಸಂಚಾಲಕತ್ವದ 5 ಮೇಳಗಳು, ಸಸಿಹಿತ್ಲು ಭಗವತಿ ಮೇಳ ಈ ಪಾತ್ರಕ್ಕೆ ಕತ್ತರಿ ಹಾಕುವುದಾಗಿ ಭರವಸೆ ನೀಡಿದ್ದು, ಪಾವಂಜೆ ಮೇಳದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರು ಸಮ್ಮತಿ ಸೂಚಿಸಿದ್ದಾರೆ.ಅದಲ್ಲದೇ ಪ್ರಸಿದ್ದ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿಯವರು ಕೂಡ ಪ್ರಸಂಗದಲ್ಲಿ ವಾವರ ಕಥೆಯ ಬದಲಾಯಿಸುವುದಲ್ಲದೇ ವಾವರ ಪಾತ್ರ ಮಾಡುವುದಿಲ್ಲ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಶಶಿಧರ್ ಶೆಟ್ಟಿ ಅವರ ಅಭಿಪ್ರಾಯವನ್ನು ಸಮರ್ಥಿಸಿಕೊಂಡಿದ್ದಾರೆ.