ಬೆಳ್ತಂಗಡಿ: ಯಕ್ಷಗಾನ ಕಲಾವಿದರೊಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಇಂದು ಅರ್ಕುಳದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಮುಂಡೂರು ಪರಂಬುಡೆ ನಿವಾಸಿ ಶೇಖರ ಆಚಾರ್ಯ ಪುತ್ರ ಸಸಿಹಿತ್ಲು ಮೇಳದ ಕಲಾವಿದ ಪ್ತ್ರವೀತ್ (21)ಸಾವನ್ನಪ್ಪಿದ ಯುವಕನಾಗಿದ್ದಾನೆ. ಫರಂಗಿಪೇಟೆ ಸಮೀಪದ ಅರ್ಕುಳ ಎಂಬಲ್ಲಿ ಬೈಕ್ ಅಪಘಾತಗೊಂಡು ಐಸ್ ಕ್ರೀಂ ಲಾರಿಯಡಿಗೆ ಸಿಲುಕಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ವಿಟ್ಲದಲ್ಲಿ ಕಾಲೇಜು ವ್ಯಾಸಂಗ ಮಾಡುತಿದ್ದ ಪ್ರವೀತ್ ಮಂಗಳೂರಿನ ಸಂಬಂಧಿಕರ ಮನೆಯಲ್ಲಿ ವಾಸವಿದ್ದರು, ಅಲ್ಲಿಂದ ಕಾಲೇಜಿಗೆ ಹೋಗುತಿದ್ದರು ಎಂದು ತಿಳಿದು ಬಂದಿದೆ.