ಮಂಡ್ಯ: ಹೆಚ್.ಎಫ್ ತಳಿಯ ಹಸುವೊಂದು ತ್ರಿವಳಿ ಹೆಣ್ಣು ಕರುಗಳಿಗೆ ಜನ್ಮವನ್ನು ನೀಡಿರುವ ಅಪರೂಪದ ಘಟನೆ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದಲ್ಲಿ ನಡೆದಿದೆ.
ಹಸು ಅವಳಿ ಕರುಗಳಿಗೆ ಜನ್ಮ ನೀಡುವುದು ಆಗಾಗ ಸುದ್ದಿಯಾಗುತ್ತದೆ. ಆದರೆ ಮೂರು ಕರುಗಳಿಗೆ ಜನ್ಮ ನೀಡುವುದು ತೀರ ಅಪರೂಪವಾಗಿದ್ದು 3 ಹೆಣ್ಣು ಕರುಗಳೂ ಆರೋಗ್ಯಕರವಾಗಿದೆ.