ಬೆಳ್ತಂಗಡಿ: ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟ ವಿಚಾರ, ಅದು ಅನಿವಾರ್ಯ ಎಂದು ಕಂಡುಬAದಲ್ಲಿ ಅವರು ಮಾಡುತ್ತಾರೆ. ಅದು ಅವರ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನ.29ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದ ಬಳಿಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಪಶ್ಚಿಮ ಘಟ್ಟದಲ್ಲಿ ನಕ್ಸಲ್ ಕಾರ್ಯಾಚರಣೆ ಮುಂದುವರಿಯುತ್ತಿದೆ. ಈಗಾಗಲೇ ನಕ್ಸಲ್ ನಾಯಕ ವಿಕ್ರಂ ಗೌಡ ಮೃತಪಟ್ಟ ಬಳಿಕ ಸರಕಾರ ನಕ್ಸಲರ ಶರಣಾಗತಿಗೆ ಮನವಿ ಮಾಡಿದೆ. ಸರಕಾರದ ಮನವಿಗೆ ನಕ್ಸಲರು ಸ್ಪಂದಿಸಿ ಶರಣಾದರೆ ಅವರಿಗೆ ಸರಕಾರದ ಎಲ್ಲ ಪ್ಯಾಕೇಜ್ ನೀಡಲಾಗುವುದು. ಇಲ್ಲವಾದಲ್ಲಿ ಮತ್ತೆ ಅವರ ಪತ್ತೆಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದರು.
ಹಾಸನದಲ್ಲಿ ಡಿ.5ರಂದು ನಡೆಯುವ ಕಾಂಗ್ರೆಸ್ ಸಮಾವೇಶ ಸರಕಾರದ ಮೇಲೆ ವಿಪಕ್ಷಗಳು ಮಾಡುತ್ತಿರುವ ಟೀಕೆ ಆರೋಪಗಳಿಗೆ ಉತ್ತರವಾಗಲಿದೆ,
ಸರ್ವ ಧರ್ಮ ಸಮ್ಮೇಳನ ಸಾಮರಸ್ಯ ಇಂದು ದೇಶಕ್ಕೆ ವಿಶ್ವಕ್ಕೆ ಅನಿವಾರ್ಯವಾಗಿದೆ. ಎಲ್ಲ ಧರ್ಮದವರು ಪ್ರೀತಿ ವಿಶ್ವಾಸ ಸಹ ಬಾಳ್ವೆಯ ಬದುಕು ನಡೆಸಬೇಕು ಎಂದರು.
ಡಿವೈಎಫ್ಐ ಯವರು ಕಮಿಷನರ್ ಹಠಾವೋ ಹೋರಾಟ ನಡೆಸುತ್ತಿರುವ ಕುರಿತು ಮಾಹಿತಿ ಇಲ್ಲ. ಇಲಾಖೆಯ ಶಿಸ್ತು ಎಲ್ಲರೂ ಪಾಲಿಸಬೇಕು, ಜನರ ಆಸ್ತಿ ಪಾಸ್ತಿಗೆ ಹಾನಿಯಾಗದಂತೆ ಇಲಾಖೆ ನಿಗದಿ ಪಡಿಸಿದ ಸ್ಥಳದಲ್ಲಿ ಹೋರಾಟಕ್ಕೆ ಅವಕಾಶ ನೀಡಬಹುದು ಎಂದು ಪ್ರತಿಕ್ರಿಯಿಸಿದರು.