ಸರ್ಕಾರಿ ಶಾಲೆಯ ಮಕ್ಕಳು ಚಿಕ್ಕಿ ತಿಂದು ಅಸ್ವಸ್ಥ: 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹೊಟ್ಟೆನೊವು ಹಾಗೂ ವಾಂತಿ: ಆಸ್ಪತ್ರೆಗೆ ಓಡೋಡಿ ಬಂದ ಅಧಿಕಾರಿಗಳು

ತುಮಕೂರು: ಚಿಕ್ಕಿ ತಿಂದು ಸರ್ಕಾರಿ ಶಾಲೆಯ ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಪಾವಗಡ ತಾಲೂಕಿನ ನಿಡಗಲ್ ಹೋಬಳಿಯ ಗುಜ್ಜನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಣನಕುರಿಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ.29ರಂದು ಸಂಭವಿಸದೆ.

ಬಿಸಿಯೂಟದೊಂದಿಗೆ ದುರ್ವಾಸನೆ ಹಾಗೂ ಹುಳ ಬಿದ್ದಿದ್ದ ಚಿಕ್ಕಿ ತಿಂದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹೊಟ್ಟೆನೊವು ಹಾಗೂ ವಾಂತಿಯಾಗಿದ್ದು ತಕ್ಷಣ ಗ್ರಾಮದ ಖಾಸಗಿ ಕಾರಿನಲ್ಲಿ ಪಟ್ಟಣದ ಸರ್ಕಾರಿ ಆಸ್ವತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ವಿಷಯ ತಿಳಿಯುತಿದ್ದಂತೆ ತಹಸೀಲ್ದಾರ್ ಹಾಗೂ ಇತರೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ್ದಾರೆ.

error: Content is protected !!