ಉಜಿರೆ: ಸಂತ ಅಂತೋನಿ ಚರ್ಚು ಇದರ ಮುಂದಾಳತ್ವದಲ್ಲಿ ಪಾಲಾನಾ ಮಂಡಳಿ ಉಪಾಧ್ಯಕ್ಷ ಅಂತೋನಿ ಫೆರ್ನಾಂಡಿಸ್ ರವರ ನೇತೃತ್ವದಲ್ಲಿ… ಚರ್ಚಿನ ಎಲ್ಲಾ ಸಂಘಟನೆಗಳು… ಮ್ಯೆಕಲ್ ಡಿಸೋಜ. ಪುತ್ತೂರು, ಸಿಒಡಿಪಿ…ಹ್ಯುಮಾನಿಟಿ ಬೆಳ್ಮಣ್…ಹಾಗೂ ಊರ, ಪರವೂರ ದಾನಿಗಳ ನೆರವಿನಿಂದ ನಿರ್ಮಾನಗೊಂಡ ನೂತನ ಮನೆಯನ್ನು ಅಶಕ್ತ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಸಂತ ಅಂತೋನಿ ಚರ್ಚು ಇದರ ಮುಂದಾಳತ್ವದಲ್ಲಿ ಇದು 5ನೇ ಯೋಜನೆಯಾಗಿದ್ದು ಇದುವರೆಗೆ ಸುಮಾರು 37 ಲಕ್ಷ ವೆಚ್ಚದಲ್ಲಿ 2021 ರಿಂದ ಇಂದಿನವರೆಗೆ ಮೂರು ಮನೆಗಳ ನವೀಕರಣ ಹಾಗೂ 2 ಹೊಸ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ.
ನೂತನ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಹ್ಯುಮಾನಿಟಿ ಟ್ರಸ್ಟ್ ಬೆಳ್ಮಣ್ ಇದರ ಸ್ಥಾಪಕರು ರೋಶನ್ ಡಿಸೋಜ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷರು ಉಷಾ ಕಿರಣ್ ಕಾರಂತ್ ಭಾಗಿಯಾಗಿ ಶುಭ ಕೋರಿದರು.
ಸಂತ ಅಂತೋನಿ ಚರ್ಚಿನ ಧರ್ಮ್ ಗುರು ವಂದನೀಯ ಅಬೆಲ್ ಲೋಬೋ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅನುಗ್ರಹ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ವಂದನೀಯ ವಿಜಯ್ ಲೋಬೋ, ದಯಾ ವಿಶೇಷ ಶಾಲೆಯ ಧರ್ಮಗುರು ವಂದನೀಯ ವಿನೋದ್ ಮಸ್ಕರೆನಸ್…ಕಾಪುಚಿನ್ ಆಶ್ರಮ ದಯಾಳ್ ಭಾಗ್ ಧರ್ಮಗುರು ವಂದನೀಯ ಎಡ್ವಿನ್ ಲೋಬೋ, ಕಾನ್ವೆಂಟ್ ಸುಪೀರಿಯರ್ ಧರ್ಮ ಬಗಿನಿ ನ್ಯಾನ್ಸಿ ಡಯಾಸ್, ಪಾಲಾನುಬವಿ ರೋಜಿ ಪಾಯ್ಸ್ ಕುಟುಂಬಸ್ಥರು ಹಾಜರಿದ್ದರು.
ಪಾಲಾನಾ ಮಂಡಳಿ ಕಾರ್ಯದರ್ಶಿ ಲಿಗೋರಿ ವಾಸ್ ಸ್ವಾಗತಿಸಿ, ಸಂಯೋಜಕಿ ಲವೀನಾ ಫೆರ್ನಾಂಡಿಸ್‌ರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.