ನೆಲಮಂಗಲ: ಮೇವು ಕೊಯ್ಯಲು ಹೋಗಿದ್ದ ಮಹಿಳೆಯ ರುಂಡ ತಿಂದು ಹಾಕಿದ್ದ ಚಿರತೆ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ.
ನವೆಂಬರ್ 18ರಂದು ಶಿವಗಂಗೆ ಬೆಟ್ಟದ ತಪ್ಪಲಲ್ಲಿರುವ ಕಂಬಾಳು ಗೊಲ್ಲರಹಳ್ಳಿಯಲ್ಲಿ ಚಿರತೆ ಮಹಿಳೆಯನ್ನು ಕೊಂದು ಹಾಕಿತ್ತು. ಮಹಿಳೆಯ ರುಂಡವಿಲ್ಲ ದೇಹ ಮಾತ್ರ ಪತ್ತೆಯಾಗಿತ್ತು. ಘಟನೆಯ ಬಳಿಕ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಳೆದೊಂದು ವಾರದಿಂದಲೂ ಕಾರ್ಯಾಚರಣೆ ನಡೆಸುತ್ತಿತ್ತು. ಕೊನೆಗೂ ಇಂದು ಬೆಳಗ್ಗೆ 8:30ಕ್ಕೆ ಇಲಾಖೆ ಇಟ್ಟಿದೆ ಬೋನಿಗೆ ಚಿರತೆ ಬಿದ್ದಿದೆ. ಆದರೆ ಇದೇ ಚಿರತೆ ಮಹಿಳೆಯನ್ನು ಬಲಿ ಪಡೆದಿತ್ತಾ? ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಬೆಟ್ಟದ ತಪ್ಪಲಲ್ಲಿರುವ ಮುದ್ವೀಶ್ವರ ದೇವಾಲಯದ ಬಳಿ ಇಟ್ಟಿದ್ದ ದೊಡ್ಡ ಬೋನಿಗೆ ಚಿರತೆ ಬಿದ್ದಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.