ಯೂಟ್ಯೂಬ್, ಫೆಸ್ ಬುಕ್, ಇನ್ ಸ್ಟಾಗ್ರಾಮ್ ನಲ್ಲಿ ಭಾರೀ ವೈರಲ್ ಆಗುತ್ತಿರುವ ‘ಅದ್ಭುತವಾದ ಜಪಾನೀ ಪಕ್ಷಿಗಳು’ ಎಂದೇ ಖ್ಯಾತಿಗಳಿಸುತ್ತಿರುವ ಈ ಪಕ್ಷಿಗಳು ನಿಜವಾಗ್ಲೂ ಇದೆಯಾ ಎಂಬ ಪ್ರಶ್ನೆ ಇದೆ.
ಪ್ರಕೃತಿ ವಿಸ್ಮಯವಾಗಿ ಈ ಪಕ್ಷಿ ಇದ್ದಿರಲುಬಹುದು ಎಂಬುದು ಅನೇಕರ ನಂಬಿಕೆ. ಯಾಕೆಂದರೆ ನಮ್ಮ ನಿಸರ್ಗದಲ್ಲಿ ನಾವು ಆಶ್ಚರ್ಯ ಪಡುವ ಅನೇಕ ಜೀವರಾಶಿಗಳಿವೆ. ಅದರಲ್ಲಿ ಈ ಪಕ್ಷಿಯೂ ಇರಬಹುದು ಎಂಬುದು ಕೆಲವರ ವಾದ. ಹೀಗಾಗಿ ‘ಜಪಾನೀ ಪಕ್ಷಿಗಳು’ ನಿಜವಾಗಿಯೂ ಇದೇ ಎಂಬುದೇ ಅನೇಕರ ನಂಬಿಕೆ.
ವಿಡಿಯೋದಲ್ಲಿ, ಎರಡು ಸುಂದರವಾದ ವರ್ಣರಂಜಿತ ಪಕ್ಷಿಗಳು ಮರದ ಕೊಂಬೆಯ ಮೇಲೆ ಕುಳಿತು ಹಾಡುತ್ತಿರುವ ದೃಶ್ಯ ಬಹಳ ಸೋಗಸಾಗಿದೆ. ತಲೆಯ ಮೇಲಿನ ಟೋಪಿ, ಮೈ ಬಣ್ಣ, ಕೊಕ್ಕು ಮತ್ತು ಕುತ್ತಿಗೆಯಲ್ಲಿರುವ ಬೆಳ್ಳಿಯ ಅಲಂಕಾರಕ್ಕೆ ನೋಡುಗರು ಮನಸ್ಸೋತ್ತಿದ್ದಾರೆ. ಕೆಲವರಂತೂ ಇದು ದೇವರ ಸೃಷ್ಟಿಯೇ ಎಂದುಕೊAಡಿದ್ದಾರೆ. ಆದರೆ ವಾಸ್ತವ ಬೇರೆಯೇ ಇದೆ.
14 ನವೆಂಬರ್ 2024 ರಂದು ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಆಗಿರುವ ವಿಡಿಯೋದಲ್ಲಿನ ಪಕ್ಷಿಗಳು ನಿಜವಲ್ಲ. ಬದಲಾಗಿ ಅವುಗಳನ್ನು AI ಅಂದರೆ ಕೃತಕ ಬುದ್ಧಿಮತ್ತೆಯ ಸಹಾಯದಿಂದ ರಚಿಸಲಾಗಿದೆ ಎಂದು ತಿಳಿದು ಬಂದಿದೆ.