ಕೊನೆಗೂ ಗುರುವಾಯನಕೆರೆ- ಉಪ್ಪಿನಂಗಡಿ ರಸ್ತೆ ದುರಸ್ತಿ ಆರಂಭ: ಹೊಂಡ ಗುಂಡಿಗಳಿಂದ ಸುದ್ದಿಯಾಗಿ, ಚಾಲಕರ ನೆಮ್ಮದಿ ಕೆಡಿಸಿದ್ದ ರಸ್ತೆ: ‘ಪ್ರಜಾಪ್ರಕಾಶ ನ್ಯೂಸ್’ ಹಾಗೂ ವಿವಿಧ ಮಾಧ್ಯಮಗಳಿಂದ ನಡೆದಿತ್ತು ಅಧಿಕಾರಿಗಳನ್ನು ಎಚ್ಚರಿಸುವ ಕಾರ್ಯ

ಬೆಳ್ತಂಗಡಿ: ಗುರುವಾಯನಕೆರೆ ಕೆರೆ ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ದುರಸ್ತಿ ಕೆಲಸ ಪ್ರಾರಂಭವಾಗಿದೆ.

ಈ ಬಾರಿ ಸುರಿದ ಭಾರೀ ಮಳೆಯಿಂದ ತಾಲೂಕಿನ ಎಲ್ಲಾ ರಸ್ತೆಗಳಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿ ಸಂಚಾರ ಕಷ್ಟಕರವಾಗಿತ್ತು. ಹೆದ್ದಾರಿಯ ಬೃಹತ್ ಹೊಂಡ ಸೇರಿದಂತೆ ರಸ್ತೆ ಸಂಪೂರ್ಣ ಹದೆಗೆಟ್ಟು ಹೋಗಿದ್ದರಿಂದ ವಾಹನ ಸವಾರರು ಪರದಾಡುವಂತಾಗಿತ್ತು.

ಹೆದ್ದಾರಿಯ ಅವ್ಯವಸ್ಥೆ ಹಾಗೂ ವಾಹನ ಸವಾರರ ಸಂಕಷ್ಟದ ಬಗ್ಗೆ ‘ಪ್ರಜಾಪ್ರಕಾಶ ನ್ಯೂಸ್’ ನ.14ರಂದು ವಿಸ್ತೃತ ವರದಿಯನ್ನು ಪ್ರಕಟಿಸಿತ್ತು. ಅಲ್ಲದೆ ವಿವಿಧ ಮಾಧ್ಯಮಗಳಿಂದ ಅಧಿಕಾರಿಗಳನ್ನು ಎಚ್ಚರಿಸುವ ಕಾರ್ಯ ನಡೆದಿತ್ತು. ಈ ಹಿನ್ನಲೆ ಇದೀಗ ಹೆದ್ದಾರಿಯಲ್ಲಿ ಇರುವ ಹೊಂಡಗಳಿಗೆ ತೇಪೆ ಹಾಕುವ ಕೆಲಸ ಪ್ರಾರಂಭವಾಗಿದೆ. ಆದರೆ ತೇಪೆ ಕಳಪೆಯಾಗದಿರಲಿ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗರ್ಭಿಣಿಯರು ಓಡಾಡಲು ಹೆದರುವ ಊರು…!!!: ಎಚ್ಚರ…!!! ಎಚ್ಚರ…!!! ಎಚ್ಚರ…!!!: ಬುದ್ಧಿವಂತರ ಊರಿನ ಅಸಹಾಯಕ ‘ಸತ್’ಪ್ರಜೆಗಳ ದರ್ಶನ…!!!

error: Content is protected !!