ಭಾರತದ ಸಂವಿಧಾನಕ್ಕೆ ಅಮೃತ ಮಹೋತ್ಸವದ ಸಂಭ್ರಮ: ಸದ್ದಿಲ್ಲದೆ ನಡೆಯುತ್ತಿದೆ ವಿಶ್ವ ದಾಖಲೆಯ ಪಯತ್ನ..!!

ಬೆಂಗಳೂರು: ಭಾರತ ದೇಶದ ಸಂವಿಧಾನ ಅಂಗೀಕಾರವಾಗಿ 75 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಸಂವಿಧಾನದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಈ ಸುಂದರ ಕ್ಷಣದ ಸುಸಂದರ್ಭದಲ್ಲಿ ವಿಶ್ವ ಗುರು ಬುದ್ಧ ಪ್ರೊಡಕ್ಷನ್ಸ್ ಸಂಸ್ಥೆ ಬೃಹತ್‌ ಕ್ಯಾನ್ವಾಸ್‌ ಮೇಲೆ ಸಂವಿಧಾನಶಿಲ್ಪಿ ಡಾ. ಬಿ.ಆರ್.‌ ಅಂಬೇಡ್ಕರ್ ಅವರ ಚಿತ್ರರಚನೆಯ ಲೈವ್ ಪೇಂಟಿಂಗ್ ಮಾಡುವ ಮೂಲಕ ವಿಶ್ವ ದಾಖಲೆ ಮಾಡುವ ಪ್ರಯತ್ನಕ್ಕೆ ಸಜ್ಜಾಗಿದೆ.

ವಿಧಾನಸೌಧದ ಶಾಸಕರ ಭವನದ ಆವರಣದಲ್ಲಿ 30 ಅಡಿ ಉದ್ದ, 40 ಅಡಿ ಅಗಲದ ಒಟ್ಟು 1200 ಚದರ ಅಡಿಯ ಬೃಹತ್ ಕ್ಯಾನ್ವಾಸ್ ಮೇಲೆ ನವೆಂಬರ್ 18, 19  ಎರಡು ದಿನಗಳ ಕಾಲ ‘ಲೈವ್ ಪೇಂಟಿಂಗ್’ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಬೃಹತ್ ಚಿತ್ರಕಲೆಯನ್ನು 20-30 ಖ್ಯಾತ ಕಲಾವಿದರು ರಚಿಸಲಿದ್ದಾರೆ ಎಂದು ವಿಶ್ವ ಗುರು ಬುದ್ಧ ಪ್ರೊಡಕ್ಷನ್ಸ್ ಸಂಸ್ಥೆ ತಿಳಿಸಿದೆ.

ಕಾರ್ಯಕ್ರಮಕ್ಕೆ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಮತ್ತು ವಿಧಾನಪರಿಷತ್ತಿನ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಅವರು ನವೆಂಬರ್‌ 18 ರಂದು ಚಾಲನೆ ನೀಡಲಿದ್ದಾರೆ.‌

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವೆಂಬರ್ 26ರಂದು ಒಟ್ಟಾಗಿ ಪರದೆ ಎಳೆಯುವ ಮೂಲಕ ಈ ಬೃಹತ್‌ ಕಲಾಕೃತಿಯನ್ನು ಲೋಕಾರ್ಪಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.‌

ಸದ್ಯ ಬೃಹತ್ ಕ್ಯಾನ್ವಾಸ್ ಮೇಲೆ ಡಾ.ಬಿ. ಆರ್.ಅಂಬೇಡ್ಕರ್ ಅವರ ಚಿತ್ರ ರಚನೆಗೆ ಭರದ ಸಿದ್ಧತೆ ನಡೆಯುತ್ತಿದೆ.

error: Content is protected !!