ಬೆಳ್ತಂಗಡಿ ಲಯನ್ಸ್ ಕ್ಲಬ್ ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ: ಬಸ್ ನಿಲ್ದಾಣ ಸಹಿತ ವಿವಿಧ ಸೇವಾ ಯೋಜನೆಗಳು ಲೋಕಾರ್ಪಣೆ:

 

 

 

ಬೆಳ್ತಂಗಡಿ:ಲಯನ್ಸ್ ಕ್ಲಬ್ , ಲಿಯೋ ಕ್ಲಬ್ ಬೆಳ್ತಂಗಡಿಗೆ ನವೆಂವರ್ 23 ರಂದು ಜಿಲ್ಲಾ ಗವರ್ನರ್ ಲ, ಭಾರತಿ ಬಿ.ಎಂ. ಅವರು ಅಧಿಕೃತ ಭೇಟಿ ನೀಡಲಿದ್ದಾರೆ. ಎಂದು ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ  ದೇವದಾಸ್ ಶೆಟ್ಟಿ ತಿಳಿಸಿದರು. ಅವರು ನ 16 ರಂದು ಲಯನ್ಸ್ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಬೆಳಿಗ್ಗೆ 9 ಗಂಟೆಗೆ ಉಜಿರೆಯಲ್ಲಿ ಗವರ್ನರ್ ಅವರನ್ನು ಸ್ವಾಗತಿಸಿ ನಂತರ ಧರ್ಮಸ್ಥಳ ದೇವಸ್ಥಾನ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಲಿದ್ದಾರೆ.10.30 ಗಂಟೆಗೆ ಬೆಳ್ತಂಗಡಿಗೆ ಆಗಮಿಸಿ 10.45 ಕ್ಕೆ ನೂತನ ಲಯನ್ಸ್ ಕ್ಲಬ್ ಕಟ್ಟಡ ವೀಕ್ಷಿಸಲಿದ್ದಾರೆ.ನಂತರ 4 ಹೊಸ ಮತ್ತು 2 ನವೀಕರಣಗೊಂಡ ಬಸ್ ನಿಲ್ದಾಣಗಳ ಲೋಕಾರ್ಪಣೆ, ಅಳದಂಗಡಿ ಸರಕಾರಿ ಕಾಲೇಜಿಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ, 25 ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ, ಬಂಗಾಡಿ ಸರಕಾರಿ ಶಾಲೆಯಲ್ಲಿ ಇ. ಲ್ಯಾಬೋರೇಟರಿ ಉದ್ಘಾಟನೆ, ಇಂದಬೆಟ್ಟು ಶಾಲೆಗೆ ನವೀನ ರೀತಿಯಲ್ಲಿ ಬಣ್ಣ, ಮುಡಾಯಿಬೆಟ್ಟು ಶಾಲೆಗೆ ಕಪಾಟು ಕೊಡುಗೆ, ಬಳೆಂಜ ಸರಕಾರಿ ಆಂಗ್ಲ ಮಾಧ್ಯಮ ಶಾಲೆಗೆ ₹ 25, 000 ಮೌಲ್ಯದ ಟೇಬಲ್ ಹಸ್ತಾಂತರ ಸೇರಿದಂತೆ ವಿವಿಧ ಸೇವಾ ಯೀಜನೆಗಳನ್ನು ನೆರವೇರಿಸಲಿದ್ದಾರೆ. ಸಂಜೆ
6.30 ಗಂಟೆಗೆ ಗುರುವಾಯನಕೆರೆ ನವಶಕ್ತಿ ರೆಸಿಡೆನ್ಸಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಕಿರಣ್ ಕುಮಾರ್, ಶೆಟ್ಟಿ ಗುರುವಾಯನಕೆರೆ,ತುಕರಾಮ್ ಬೆಳ್ತಂಗಡಿ, ಲಕ್ಷ್ಮಣ ಪೂಜಾರಿ ಕೈಪ್ಲೋಡಿ , ಅಶೋಕ್‌ ಬಿ.ಪಿ. ಉಪಸ್ಥಿತರಿದ್ದರು.

error: Content is protected !!