ಗರ್ಭಿಣಿಯರು ಓಡಾಡಲು ಹೆದರುವ ಊರು…!!!: ಎಚ್ಚರ…!!! ಎಚ್ಚರ…!!! ಎಚ್ಚರ…!!!: ಬುದ್ಧಿವಂತರ ಊರಿನ ಅಸಹಾಯಕ ‘ಸತ್’ಪ್ರಜೆಗಳ ದರ್ಶನ…!!!

ಮಂಗಳೂರು: ಹೆಸರಿಗಷ್ಟೇ ಇದು ಬುದ್ಧಿವಂತರ ಜಿಲ್ಲೆ, ಆದರೆ ಇಲ್ಲಿನ ಜನತೆ ಇಡೀ ಊರಿಗೇ ಸಮಸ್ಯೆಯಾದರೂ ಸುಮ್ಮನಿರುವಷ್ಟು ಸಹಿಷ್ಣುಗಳು…!. ಇದು ಇನ್ನೂ ಮುಂದುವರೆದು ಕನಿಷ್ಠ ತಮಗೆ ಆಗುತ್ತಿರುವ ಅನ್ಯಾಯವನ್ನು ಎದ್ದು ನಿಂತು ಪ್ರಶ್ನಿಸದೇ ಇರುವಷ್ಟು ಹಂತದವರೆಗೆ ಮುಂದುವರಿದಿರುವುದು ಬೇಸರದ ಸಂಗತಿ. ಇಷ್ಟಕ್ಕೂ ಈ ವಿಚಾರ ಪ್ರಸ್ತಾಪಿಸಲು ಇರುವ ಕಾರಣವೆಂದರೆ ಕರಾವಳಿಯ ಬಹುತೇಕ ಭಾಗಗಳಲ್ಲಿ ಓಡಾಡಲು ರ‍್ಭಿಣಿಯರು ನರ‍್ಭೀತಿಯಿಂದ ಓಡಾಡಲೂ ಹೆದರುವಂತಾಗಿದೆ. ಇಂತಹ ಅನಾಗರೀಕ ಸಂರ‍್ಭ ಎದುರಾಗಿದೆ ಎಂದರೆ ನಾವೆಲ್ಲರೂ ಶಿಕ್ಷಿತರೇ ಎಂದು ಪ್ರಶ್ನಿಸುವ ಹಂತಕ್ಕೆ ಇದು ತಲುಪಿದೆ. ಆಡಳಿತ ಪಕ್ಷ, ನಾಯಕರು ಅಥವಾ ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನಿಸದ ಹಂತಕ್ಕೆ ಹೊಂದಾಣಿಕೆ ರಾಜಕೀಯ ಎದ್ದು ಕಾಣುತ್ತಿದೆ. ಪ್ರತಿಯೊಂದು ವಿಚಾರಕ್ಕೂ ಪ್ರತಿಭಟನೆ ನಡೆಸುವ ಸಂಘ ಸಂಸ್ಥೆಗಳೂ ಮೌನವಾಗಿರುವುದು ಬೇಸರದ ಸಂಗತಿ. ಹೌದು… ಕರಾವಳಿಯಾದ್ಯಂತ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳು, ಬಹುತೇಕ ಎಲ್ಲಾ ಸಂರ‍್ಕ ರಸ್ತೆಗಳು ಹೊಂಡ ಬಿದ್ದಿದ್ದು, ರ‍್ಭಿಣಿಯರು, ವೃದ್ಧರು, ಅನಾರೋಗ್ಯ ಪೀಡಿತರು ಅಷ್ಟೇ ಏಕೆ ಜನಸಾಮಾನ್ಯರೂ ಹೆದರುವಂತಾಗಿದೆ. ಆದರೆ ಪ್ರಶ್ನಿಸುವವರು ಯಾರೂ ಇಲ್ಲ ಎಂಬಂತಾಗಿದೆ.

ಇತ್ತೀಚೆಗೆ ರ‍್ಭಿಣಿಯೊಬ್ಬರು ತಿಳಿಸಿದ ಮಾಹಿತಿಯಂತೆ “ವೈದ್ಯರೊಬ್ಬರು ಆರೋಗ್ಯ ಕಾಪಾಡಿಕೊಳ್ಳುವಂತೆ ಹಾಗೂ ಹೊಂಡಮಯ ರಸ್ತೆಯಲ್ಲಿ ಸಂಚರಿಸದೆ ಆರೋಗ್ಯ ಕಾಪಾಡಿಕೊಳ್ಳಬೇಕಾಗಿ ಎಚ್ಚರಿಕೆ ನೀಡಿದ್ದಾರೆ. ಆದರೆ ಇಂದಿನ ದಿನಗಳಲ್ಲಿ ಹೊಂಡಗಳೇ ಇಲ್ಲದ ರಸ್ತೆ ಯಾವ ಕಡೆ ಇದೆ ಎಂದರೆ ಉತ್ತರವೇ ಸಿಗುವುದಿಲ್ಲ, ಬಸ್ ಗಳು ಶರವೇಗದಲ್ಲಿ ಹೊಂಡ ಗುಂಡಿಗಳನ್ನೂ ಲೆಕ್ಕಿಸದೆ ಸಾಗುವುದರಿಂದ ಅವುಗಳಲ್ಲಿ ಹೋಗುವಂತೆಯೇ ಇಲ್ಲ. ಇನ್ನು ಮನೆ ಮಂದಿಯೊಂದಿಗೆ ಬೈಕ್ ನಲ್ಲಿ ಹೋದರೆ ಎಲ್ಲರೂ ಬಿದ್ದು ಏನಾದರೂ ಆಗುವುದೋ ಎಂಬ ಆತಂಕ. ಖಾಸಗಿ ವಾಹನಗಳನ್ನು ಬಾಡಿಗೆ ಕಟ್ಟಿ ಎಷ್ಟು ಎಂದು ನಿಧಾನವಾಗಿ ಚಲಿಸಲು ತಿಳಿಸಲು ಹೇಳಲಾಗುತ್ತದೆ, ಟ್ರಾಫಿಕ್ ಮಯ ರಸ್ತೆಯಲ್ಲಿ ಎಷ್ಟು ನಿಧಾನವಾಗಿ ಚಲಿಸಲು ಸಾಧ್ಯವಾಗುತ್ತದೆ” ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಸಿಗುವ ಉತ್ತರ ಮಾತ್ರ ಶೂನ್ಯ.

ಹೌದು… ರಾಷ್ಟ್ರೀಯ ಹೆದ್ದಾರಿ ಬಿ.ಸಿ. ರೋಡ್ – ಬೆಂಗಳೂರು ರಸ್ತೆಯ ಬಿ.ಸಿ. ರೋಡ್ ನಿಂದ ಕರಾವಳಿ ವ್ಯಾಪ್ತಿಯ ಶಿರಾಡಿ ಘಾಟ್ ವರೆಗೂ ಹೊಂಡ ತಪ್ಪಿಸುವುದೇ ಅಸಾಧ್ಯ ಎಂಬಂತಾಗಿದೆ. ಇನ್ನು ಬಿ.ಸಿ. ರೋಡ್ ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆಯಿಂದ ಕರಾವಳಿ ವ್ಯಾಪ್ತಿಯ ರ‍್ಮಾಡಿ ಘಾಟ್ ಆರಂಭದವರೆಗೂ ಹೊಂಡಗಳನ್ನು ತಪ್ಪಿಸುವುದೇ ಅಸಾಧ್ಯ ಎಂಬ ಪರಿಸ್ಥಿತಿ ನರ‍್ಮಾಣವಾಗಿದೆ‌. ಇತ್ತೀಚೆಗೆ ಸಣ್ಣ ಮಟ್ಟಿನ ವೆಟ್ ಮಿಕ್ಸ್ ಹಾಕಿದ್ದು ಎಷ್ಟು ದಿನ ಉಳಿಯಲಿದೆಯೋ ತಿಳಿದಿಲ್ಲ. ಇನ್ನು ರಾಜ್ಯ ಹೆದ್ದಾರಿಗಳೂ ಇದರಿಂದ ಹೊರತಾಗಿಲ್ಲ… ಪುತ್ತೂರು – ಉಪ್ಪಿನಂಗಡಿ, ಉಪ್ಪಿನಂಗಡಿ – ಗುರುವಾಯನಕೆರೆ ಜೊತೆಗೆ ಪುತ್ತೂರು, ಸುಳ್ಯ ತಾಲೂಕಿನ ಬಹುತೇಕ ರಸ್ತೆಗಳು ಹೊಂಡ ಗುಂಡಿಗಳಿಂದ ಕೂಡಿವೆ. ಜಿಲ್ಲೆಯ ಬಹುತೇಕ ಗ್ರಾಮೀಣ ರಸ್ತೆಗಳೂ ಹೊಂಡ ಗುಂಡಿಗಳಿಂದ ಕೂಡಿದ್ದು ವಾಹನ ಸವಾರರು ಪರದಾಡುವಂತಾಗಿದೆ.

ಬಡವನ‌ ಕೋಪ: 

ಸೋಷಿಯಲ್ ಮೀಡಿಯಾ ಸ್ಟಾರ್ ಒಬ್ಬರು ‌ಉಪ್ಪಿನಂಗಡಿ ಗುರುವಾಯನಕೆರೆ ರಸ್ತೆಯ ಕುಪ್ಪೆಟ್ಟಿ ಬಳಿ ರಸ್ತೆ ಮಧ್ಯದಲ್ಲಿ ನರ‍್ಮಾಣವಾಗಿದ್ದ ಬೃಹತ್ ಹೊಂಡವನ್ನು ಅಣಕವಾಡಿದ್ದರು. ಬಳಿಕ ಕೆಲ ದಿನಗಳ ಬಳಿಕ ಮತ್ತೆ ರಾತ್ರಿ ರಸ್ತೆಯ ಹೊಂಡಕ್ಕೆ ಬಿದ್ದು, ತಾವು “ಸಾಯದೆ ಇರುವುದೇ ದೊಡ್ಡ ವಿಷಯ, ರಸ್ತೆ ಇಷ್ಟು ಕಳಪೆ ನರ‍್ವಹಣೆ ಮಾಡಿದರೆ ವಾಹನ ರಿಪೇರಿ ಮಾಡಿಸುವುದು ವ್ರ‍್ಥ, ಜನಸಾಮಾನ್ಯರಿಗೆ ಈ ರೀತಿ ತೊಂದರೆ ಆಗಬಾರದು” ಎಂದು ಆಕ್ರೋಶ ಹೊರ ಹಾಕಿದ್ದರು. ಆದರೆ ಇದು ಬಹುತೇಕ ಎಲ್ಲರ ಸಮಸ್ಯೆಯಾಗಿದೆ. ಆದರೆ ಬಡವನ ಕೋಪ ದವಡೆಗೆ ಎಂಬಂತೆ ಯಾರೂ ಮಾತನಾಡದೆ ಮೌನವಾಗಿದ್ದಾರೆ.

ಕಳಪೆ ವೆಟ್ ಮಿಕ್ಸ್: 

ಮಳೆಯ ಬಳಿಕ ಪ್ಯಾಚ್ ವರ್ಕ್  ಎಂಬ ಕಾರಣ ನೀಡಿ ಅಧಿಕಾರಿಗಳು, ಜನಪ್ರತಿನಿಧಿಗಳು ಜಾರಿಕೊಳ್ಳುತ್ತಿದ್ದಾರೆ. ಕೆಲ ಭಾಗಗಳಲ್ಲಿ ಕನಿಷ್ಠ ವೆಟ್ ಮಿಕ್ಸ್ ಕೂಡ ಹಾಕುತ್ತಿಲ್ಲ. ಕೆಲವು ಕಡೆ ಹಾಕಿದರೂ ಕಳಪೆಯನ್ನು ಮಾತ್ರ ಹಾಕಿತ್ತಿರುವುದು ಜನಸಾಮಾನ್ಯರಿಗೆ ಇನ್ನಷ್ಟು ಸಮಸ್ಯೆ ತಂದೊಡ್ಡಿದೆ. ರಸ್ತೆ ನರ‍್ವಹಣೆಯಲ್ಲಿ ‌ಅಧಿಕಾರಿಗಳು ಸಂಪರ‍್ಣ ವಿಫಲರಾಗಿದ್ದು, ಜನಸಾಮಾನ್ಯರ ಬಗೆಗಿನ  ನಿರ್ಲಕ್ಷ್ಯ  ಧೋರಣೆ ಎದ್ದು ಕಾಣುತ್ತಿದೆ.

ಸಿಂಗಾರಕ್ಕಷ್ಟೇ ಸೀಮಿತ: 

ಹೊಂಡಗಳು ಬೀಳಲು ನರ‍್ವಹಣೆಯ ‌ಕೊರತೆಯೇ ಪ್ರಮುಖ ಕಾರಣವಾಗಿದೆ. ಬಿ.ಸಿ. ರೋಡ್ ಮಂಗಳೂರು ಟೋಲ್ ರಸ್ತೆಯಲ್ಲಿ ಟೋಲ್ ಪಡೆದರೂ‌ ಸರ‍್ಪಕ ನರ‍್ವಹಣಾ ಕರ‍್ಯ ನಡೆಸಿಲ್ಲ. ಕೆಲವು ಕಡೆ ಹೊಂಡ ತಿಳಿಸಲು ಬ್ಯಾರಿಕೇಡ್ ಇಡಲಾಗಿದೆ. ಉಪ್ಪಿನಂಗಡಿ – ಪುತ್ತೂರು ‌ರಸ್ತೆ ಅವ್ಯವಸ್ಥೆಯ ಮೂಲ ಎಂಬಂತಾಗಿದೆ. ಕಳಪೆ ಕಾಮಗಾರಿಗೆ ಉದಾಹರಣೆಯಾಗಿ ನಿಂತಿದೆ. ಇಲ್ಲಿ ಈಗಾಗಲೇ ನರ‍್ಮಾಣವಾಗಿರುವ ರಸ್ತೆಯಲ್ಲಿ ಹೊಂಡ ಇದ್ದರೂ ಅದಕ್ಕೆ ವೆಟ್ ಮಿಕ್ಸ್ ಹಾಕುವ ಕರ‍್ಯಕ್ಕೇ ಹೋಗಿಲ್ಲ. ಇದು ನಗರ ವ್ಯಾಪ್ತಿ ಅಥವಾ ಗ್ರಾಮೀಣ ವಲಯಕ್ಕೂ ಅನ್ವಯ. ರಾಜ್ಯ ಹೆದ್ದಾರಿಯಲ್ಲಿ ಸವಾರರು ಹೊಂಡ ತಪ್ಪಿಸಲು ಪರದಾಡುತ್ತಿದ್ದರೆ, ಅಧಿಕಾರಿಗಳು ಮಾತ್ರ ಡಿವೈಡರ್ ನ ಹುಲ್ಲು ತೆಗೆದು ಗಿಡ ನೆಡುವ ಕರ‍್ಯಕ್ಕೆ ಮುಂದಾಗಿದ್ದಾರೆ‌. ರಸ್ತೆಯೇ ಸರ‍್ಪಕವಾಗಿರದೆ ಹೂವಿನ ಗಿಡಗಳನ್ನು ನೆಟ್ಟರೆ ಈ ವ್ರ‍್ಥ ಸಿಂಗಾರ ಯಾರಿಗಾಗಿ…?? ಹೂಗಳನ್ನು ಎಲ್ಲಿಗೆ ಇಡಲು ಬೆಳೆಸುತ್ತಿದ್ದಾರೆ ಎಂಬುದು ಸರ‍್ವಜನಿಕರ ಪ್ರಶ್ನೆ.‌

ಮಣ್ಣಿನ ಪ್ಯಾಚ್ ವರ್ಕ್

ಕೆಲವು ಕಡೆ ಮಣ್ಣಿನಿಂದ ಹೊಂಡ ಮುಚ್ಚುವ ಕರ‍್ಯ ಮಾಡಿದ್ದಾರೆ. ಹೀಗಾದಲ್ಲಿ ನಾವು ಕಟ್ಟಿದ ತೆರಿಗೆ ಹಣ ಯಾರಿಗೆ. ಪ್ರತಿ ವಸ್ತುವಿಗೂ ತೆರಿಗೆ ವಿಧಿಸಲಾಗುತ್ತದೆ. ಆದರೆ ಪ್ಯಾಚ್ ಹಾಕಲು ಅಥವಾ ವೆಟ್ ಮಿಕ್ಸ್ ಹಾಕಲು ಸರಕಾರದ ಬಳಿ ದುಡ್ಡಿಲ್ಲವೇ…?? ಎಂಬ ಪ್ರಶ್ನೆ ಜನಸಾಮಾನ್ಯರದ್ದು. ಜೊತೆಗೆ ಮಣ್ಣು ರಸ್ತೆಗೆ ಹಾಕಿದಲ್ಲಿ ದ್ವಿಚಕ್ರ ವಾಹನ ಸವಾರರು ಬೀಳುವ ಸಾಧ್ಯತೆ ಅಧಿಕವಾಗಿದೆ. ಮಳೆ ಬಂದರೆ ಕೆಸರುಮಯವಾಗಿ ಮತ್ತೆ ಸಮಸ್ಯೆ ಉಲ್ಬಣಿಸುತ್ತದೆ.

ವಾಹನ ರಿಪೇರಿ:

ರಸ್ತೆ ಸರಿ ಇಲ್ಲ ಎಂಬ ಮಾನಸಿಕ ಕಿರಿಕಿರಿ ಒಂದೆಡೆಯಾದರೆ. ವಾಹನಗಳು ಪದೇ ಪದೇ ದುರಸ್ತಿಗೆ ಒಳಗಾಗಿ ಸಾವಿರಗಟ್ಟಲೆ ಹಣ ರ‍್ಚಾಗುತ್ತಿದೆ. ಕೆಲವು ಕಡೆ ವಾಹನಗಳು ರಸ್ತೆ ಬದಿ ಕೆಟ್ಟು ನಿಂತ ಹಲವಾರು ಉದಾಹರಣೆಗಳಿವೆ. ಇದು ದ್ವಿ ಚಕ್ರ ವಾಹನಗಳಿಂದ ಹಿಡಿದು ದೊಡ್ಡ ವಾಹನಗಳೂ ಕೆಟ್ಟು ಹೊಂಡಮಯ ರಸ್ತೆಯ ಕೊಡುಗೆ ಅಪಾರ. ಸರಕಾರಿ ವಾಹನ ಜನಪ್ರತಿನಿಧಿಗಳ ವಾಹನವನ್ನು ನಮ್ಮದೇ ತೆರಿಗೆ ಹಣದಲ್ಲಿ ರಿಪೇರಿ ಮಾಡುತ್ತಾರೆ ಆದರೆ ನಮಗೆ ಮಾತ್ರ ಡಬಲ್ ದಂಡ ಎನ್ನುವುದು ಸರ‍್ವಜನಿಕರ ಅಭಿಪ್ರಾಯ.

ಇಂಧನ ಪೋಲು: 

ಬೆಂಕಿಯಿಂದ ಬಾಣಲೆಗೆ ಎಂಬಂತೆ ಇಂಧನವೂ ಹೆಚ್ಚು ರ‍್ಚಾಗುತ್ತಿದೆ. ಇದನ್ನು ಹೆಚ್ಚುವರಿ ದಂಡದಂತೆ ಕಟ್ಟಬೇಕಾದ ಪರಿಸ್ಥಿತಿ ಇದೆ.

ಆಂಬ್ಯುಲೆನ್ಸ್ ಚಾಲಕರ ಪತ್ರ ವೈರಲ್: 

ಬೆಳ್ತಂಗಡಿಯ ಆಂಬ್ಯುಲೆನ್ಸ್ ಚಾಲಕರೊಬ್ಬರು ಕೆಲವು ದಿನಗಳ ಹಿಂದೆ ವಾಟ್ಸ್ಯಾಪ್ ಮೂಲಕ ರ‍್ಭಿಣಿಯರು, ವೃದ್ಧರು, ರೋಗಿಗಳಿಗೆ ಹಾಗೂ ಆಂಬ್ಯುಲೆನ್ಸ್ ಚಾಲಕರಿಗೆ ರಸ್ತೆ ಸಮಸ್ಯೆಯಿಂದ ಆಗುತ್ತಿರುವ ಸಮಸ್ಯೆ ಕುರಿತು ಗಮನ ಸೆಳೆದಿದ್ದರು. ರಸ್ತೆ ಸರಿಪಡಿಸದೆ ಇದ್ದಲ್ಲಿ ಅವರ ಶಾಪ ತಟ್ಟದೇ ಇರದು ಎಂದೂ ತಿಳಿಸಿದ್ದರು. ಇದು ನಡೆದು ಹಲವು ದಿನಗಳು ಕಳೆದರೂ ಫಲಿತಾಂಶ ಮಾತ್ರ ತೃಪ್ತಿಕರವಾಗಿ ಇಲ್ಲ.

ಮಳೆ ಕಡಿಮೆಯಾಗಿ ಕೆಲವು ದಿನಗಳೇ ಕಳೆದಿವೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕೆಲಸವನ್ನಾದರೂ ಮಾಡಲು ಕ್ರಮಕೈಗೊಳ್ಳಲಿ ಎಂಬುವುದೇ ಸಾರ್ವಜನಿಕರ ಒಕ್ಕೊರಲ ಆಗ್ರಹವಾಗಿದೆ.

error: Content is protected !!