ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ ಅವರಿಗೆ ಕೋರ್ಟ್ ಜಾಮೀನು ನಿರಾಕರಿಸಿದ್ದು ಅದಕ್ಕೆ 9 ಕಾರಣಗಳನ್ನು ನೀಡಿದೆ.
ಜಾಮೀನು ನಿರೀಕ್ಷೆಯಲ್ಲಿದ್ದ ಆರೋಪಿ ದರ್ಶನ್‌ಗೆ ನಿನ್ನೆ ನಾಯಾಲಯ ನಿರಾಸೆ ಮೂಡಿಸಿದೆ. ಇದಕ್ಕೆ ಕೋರ್ಟ್ ನೀಡಿದ ಕಾರಣ ಹೀಗಿದೆ.
ಐ ವಿಟ್ನೆಸ್ ಹೇಳಿಕೆಗಳು ಕಾನೂನು ಪ್ರಕಾರವಾಗಿವೆ.
- ರೇಣುಕಾಸ್ವಾಮಿ ಮೃತದೇಹದ ಗುರುತು ಪತ್ತೆ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ತಡವಾಗಿಲ್ಲ.
ದರ್ಶನ್ ಟ್ರಯಲ್ ಆರಂಭವಾದ ಬಳಿಕ ಆರೋಪಿಗಳ ಹೇಳಿಕೆಯ ಬಗ್ಗೆ ತಿಳಿಯುತ್ತದೆ.
ದರ್ಶನ್ ಕ್ರಾಸ್ ಎಕ್ಸಾಮಿನ್ ಮಾಡಿದಾಗ ರಿಕವರಿಯ ಅಂಶಗಳ ಬಗ್ಗೆ ತಿಳಿಯುತ್ತದೆ
ಸಿಡಿಆರ್ ನಲ್ಲಿ ಎ2 ಆರೋಪಿ ದರ್ಶನ್ ಕೃತ್ಯ ನಡೆದ ಸ್ಥಳದಲ್ಲಿರೋದು ಸ್ಪಷ್ಟವಾಗಿದೆ
ಈ ಹಂತದಲ್ಲಿ ಸಾಕ್ಷಿಗಳ ಹೇಳಿಕೆ ತಡವಾಗಿದೆ ಅನ್ನೋದಕ್ಕೆ ಪುರಾವೆಗಳಿಲ್ಲ
ಡಿ ಎನ್ ಎ ಟೆಸ್ಟ್ ನಲ್ಲಿ ದರ್ಶನ್ ಕೃತ್ಯ ನಡೆದ ಸ್ಥಳದಲ್ಲಿ ಇದ್ದ ಬಗ್ಗೆ ಸ್ಪಷ್ಟಪಡಿಸಿದೆ
ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ರೇಣುಕಾಸ್ವಾಮಿ ಯ ಕೊಲೆಯ ಕ್ರೂರತೆ ಬಗ್ಗೆ ತಿಳಿಸಿದೆ
ಸಮಾಜದಲ್ಲಿ ದರ್ಶನ್ ರೋಲ್ ಮಾಡೆಲ್ ಆಗಿದ್ದು, ಸಾಕಷ್ಟು ಜನ್ರು ಪ್ರಭಾವಿತರಾಗಿರ್ತಾರೆ
ಇವಿಷ್ಟು ಕಾರಣಗಳನ್ನು ನೀಡಿರುವ ಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲರ ತಂಡ ಹೈಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಲು ಸಜ್ಜಾಗಿದ್ದಾರೆ.
ಒಂದೆಡೆ ದರ್ಶನ್ ಗೆ ಬೆನ್ನು ನೋವು ವಿಪರೀತವಾಗಿದ್ದು ಈ ಬಗ್ಗೆ ಕುಟುಂಬಸ್ಥರು ಮೆಡಿಕಲ್ ವರದಿ ಸಿದ್ಧ ಮಾಡಿಕೊಂಡಿದ್ದಾರೆ. ಅನಾರೋಗ್ಯದ ಕಾರಣ ನೀಡಿ ಬೆಂಗಳೂರಿಗೆ ಶಿಫ್ಟ್ ಆಗಲು ಯೋಜನೆ ನಡೆದಿದೆ. ದರ್ಶನ್ ಗೆಳತಿ ಆರೋಪಿ ಪವಿತ್ರಾ ಕೂಡ ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.