ಬೆಳ್ತಂಗಡಿ,ಭರದಿಂದ ಸಾಗುತ್ತಿದೆ ಇಂದಿರಾ ಕ್ಯಾಂಟಿನ್ ಕಾಮಗಾರಿ: ಶೀಘ್ರವೇ ಜನತೆಗೆ ಲಭಿಸಲಿದೆ ಅಗ್ಗದ ಊಟ ತಿಂಡಿ:

 

 

 

ಬೆಳ್ತಂಗಡಿ:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಕಡಿಮೆ ದರದಲ್ಲಿ ಜನ ಸಾಮಾನ್ಯರಿಗೆ ಆಹಾರ ಒದಗಿಸುವ ಇಂದಿರಾ ಕ್ಯಾಂಟಿನ್ ಬೆಳ್ತಂಗಡಿಯಲ್ಲಿ ಶೀಘ್ರವೇ ಪ್ರಾರಂಭವಾಗಲಿದ್ದು, ಇದರ ಕಾಮಗಾರಿ ಈಗಾಗಲೇ ಭರದಿಂದ ಸಾಗಿದೆ.

ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಸ್ ನಿಲ್ದಾಣದ ಬಳಿ ಇರುವ ಅಂಬೇಡ್ಕರ್ ಭವನದ ಹತ್ತಿರ ಕಟ್ಟಡ ನಿರ್ಮಾಣವಾಗುತಿದ್ದು, ಒಂದೆರಡು ತಿಂಗಳಲ್ಲಿ ಬೆಳ್ತಂಗಡಿಯಲ್ಲಿಯೂ ಜನರಿಗೆ ಅಗ್ಗದ ದರದಲ್ಲಿ ಉತ್ತಮ ಗುಣ ಮಟ್ಟದ ಊಟ, ತಿಂಡಿ,ಆಹಾರ ಪದಾರ್ಥಗಳು ಲಭ್ಯವಾಗಲಿದೆ. ಕಳೆದ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ರಾಜ್ಯಾದ್ಯಂತ ಇಂದಿರಾ ಕ್ಯಾಂಟಿನ್ ಪ್ರಾರಂಭವಾದಾಗ  ಬೆಳ್ತಂಗಡಿಯಲ್ಲಿಯೂ ಇಂದಿರಾ ಕ್ಯಾಂಟಿನ್ ಬೇಡಿಕೆಯನ್ನು ಮಾಜಿ ಶಾಸಕ ದಿ. ವಸಂತ ಬಂಗೇರ ಅವರು ಸರ್ಕಾರಕ್ಕೆ ಮನವಿಯನ್ನು ಮಾಡಿದಾಗ ಬೆಳ್ತಂಗಡಿಗೂ ಇಂದಿರಾ ಕ್ಯಾಂಟಿನ್ ಮಂಜೂರುಗೊಂಡಿತ್ತು. ಅದರೆ  ಬಿಜೆಪಿ ಸರ್ಕಾರ ಬಂದ್ದ ನಂತರ ರಾಜ್ಯದೆಲ್ಲೆಡೆ ಇಂದಿರಾ ಕ್ಯಾಂಟಿನ್ ಗಳು ನೆನೆಗುದಿಗೆ ಬಿದ್ದು ಮುಚ್ಚಿ ಹೋಗಿದ್ದವು. ಬೆಳ್ತಂಗಡಿಯಲ್ಲಿ ಕ್ಯಾಂಟಿನ್ ಕನಸು ಹಾಗೆಯೇ ಉಳಿಯಿತು.  ಅದರೆ ಈ ಬಾರಿ  ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಇಂದಿರಾ ಕ್ಯಾಂಟಿನ್ ಗಳು   ಮತ್ತೆ ಕಾರ್ಯರಂಭಗೊಂಡಿದ್ದವು.‌ಈ ಬಗ್ಗೆ ಮಾಜಿ ಶಾಸಕ ವಸಂತ ಬಂಗೇರ ಅವರ ಇಂದಿರಾ ಕ್ಯಾಂಟಿನ್ ಬೇಡಿಕೆಯ‌ ಪ್ರಸ್ತಾಪವನ್ನು,  ಸರ್ಕಾರದ ಗಮನಕ್ಕೆ ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮತ್ತೆ ತಂದಾಗ   ಬೆಳ್ತಂಗಡಿಗೆ ಮಂಜೂರುಗೊಂಡಿದ್ದ  ಇಂದಿರಾ ಕ್ಯಾಂಟಿನ್ , ಕಾಮಗಾರಿ ಪ್ರಾರಂಭಿಸಿದ್ದು  , ಶೀಘ್ರದಲ್ಲೇ ಕಾರ್ಯರಂಭಗೊಳ್ಳಲಿದೆ.

error: Content is protected !!