ಬೆಳ್ತಂಗಡಿ: ದಸರಾ ರಜೆಯಿಂದಾಗಿ ರಾಜ್ಯದ ಪ್ರವಾಸಿ ತಾಣ, ಧಾರ್ಮಿಕ ಸ್ಥಳಗಳಲ್ಲಿ ಭಕ್ತರ ಸಂಖ್ಯೆ ದ್ವಿಗುಣವಾಗಿದೆ. ಎರಡು ದಿನಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ, ಸುಬ್ರಹ್ಮಣ್ಯದಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ.ಪ್ರವಾಸಿಗರ ಸಂಖ್ಯೆ ದಿನದಿಂದ ದಿನ ಹೆಚ್ಚಾಗುತ್ತಲಿರುವುದರಿಂದ ಬಸ್ ಗಳ ಕೊರತೆ ಕಂಡು ಬಂದಿದ್ದು, ಇದಕ್ಕಾಗಿ ಸುಮಾರು 200 ಬಿಎಂಟಿಸಿ ಬಸ್ ಗಳನ್ನು ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಹೆಚ್ಚುವರಿಯಾಗಿ ಹಾಕಲಾಗಿದೆ.ಈ ಬಗ್ಗೆ ಬಿಎಂಟಿಸಿ ಚಾಲಕರೊಬ್ಬರು ಮಾಹಿತಿಯನ್ನು ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಶನಿವಾರ ಹಾಗೂ ಆದಿತ್ಯವಾರ ರಸ್ತೆಯುದ್ದಕ್ಕೂ ಹಾಗೂ ಬಸ್ ನಿಲ್ದಾಣಗಳಲ್ಲಿ ಹಲವಾರೂ ಬಿಎಂಟಿಸಿ(ಬೆಂಗಳೂರು ಸಾರಿಗೆ) ಬಸ್ ಗಳು ಸಾಲಾಗಿ ನಿಂತಿರುವುದು ಕಂಡು ಬರುತ್ತಿದೆ.., ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಎಲ್ಲಾ ಕಡೆಗಳಲ್ಲಿಯೂ ಮಹಿಳೆಯ ಸಂಖ್ಯೆಯೇ ಹೆಚ್ಚಾಗಿ ಕಂಡು ಬರುತ್ತಿದೆ.