ಬೆಂಗಳೂರು: ರಂಗೋಲಿಯಲ್ಲಿ ದಿವಂಗತ ರತನ್ ಟಾಟಾ ಅವರನ್ನು ಚಿತ್ರಿಸುವ ಮೂಲಕ ಕಲಾವಿದರೊಬ್ಬರು ರತನ್ ಟಾಟಾರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಕಲಾವಿದ ಅಕ್ಷಯ್ ಜಾಲಿಹಾಳ್ ನಾಡಪ್ರಭು ಕೆಂಪೇಗೌಡ ಮೆಟ್ರೋ ಸ್ಟೇಷನ್ ಮೆಜೆಸ್ಟಿಕ್‌ನಲ್ಲಿ ನಿನ್ನೆ ರಾತ್ರಿ 9 ಗಂಟೆಯಿAದ ಇಂದು ಬೆಳಗ್ಗೆ 7 ಗಂಟೆಯವರೆಗೆ ಸತತ 10 ಗಂಟೆಗಳ ಕಾಲ 8ಘಿ8 ಅಡಿಯ ಟಾಟಾರನ್ನು ಬಿಂಬಿಸುವ ಬೃಹತ್ ರಂಗೋಲಿಯನ್ನು ಚಿತ್ರಿಸಿದ್ದಾರೆ. ಈ ಮೂಲಕ ಅಕ್ಷಯ್ ಜಾಲಿಹಾಳ್ ಅವರು ಉದ್ಯಮಿ ದಿವಂಗತ ರತನ್ ಟಾಟಾ ಅವರಿಗೆ ವಿಶೇಷವಾಗಿ ನಮನ ಸಲ್ಲಿಸಿದ್ದಾರೆ.
ಈ ಕುರಿತು ಮಾದ್ಯಮದ ಜೊತೆ ಮಾತನಾಡಿರುವ ಅವರು, “ದಿವಂಗತ ರತನ್ ಟಾಟಾ ತಮ್ಮ ಜೀವಮಾನದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿದ್ದಾರೆ. ಗಂಧದ ಮರದ ರೀತಿಯಲ್ಲಿಯೇ ಎಲ್ಲೆಡೆ ಸುಗಂಧ ಪಸರಿಸಿದ್ದಾರೆ. ಸಮಾಜ, ದೇಶಕ್ಕೆ ಪ್ರೇರಣಾಶಕ್ತಿಯಾಗಿದ್ದರು. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಂಗೋಲಿ ಬಿಡಿಸಿದ್ದೇನೆ. ನನ್ನ ತಂದೆ ರವೀಂದ್ರ ಜಾಲಿಹಾಳ್ ಅವರ ಸಹಕಾರ ಈ ರಂಗೋಲಿ ಬಿಡಿಸಿರುವುದರಲ್ಲಿ ಸಾಕಷ್ಟಿದೆ. ನಮ್ಮ ಮೆಟ್ರೋ ಅಧಿಕಾರಿಗಳ ಒತ್ತಾಸೆ ಹಾಗೂ ಸಹಕಾರವೂ ಇದೆ” ಎಂದಿದ್ದಾರೆ.