ವಯನಾಡು ಭೂಕುಸಿತವಂತೂ ಎಂದೂ ಮರೆಯಲಾಗದ ಘಟನೆ. ಈಗ ಅಂತಹದ್ದೇ ಘಟನೆ ನಂದಿ ಹಿಲ್ಸ್ ನಲ್ಲೂ ಸಂಭವಿಸುವ ಸಾಧ್ಯತೆಯಿದೆ ಎಂದು ಭೂ ವಿಜ್ಞಾನಿಗಳು ಆತಂಕಕಾರಿ ವಿಚಾರ ಹೊರಹಾಕಿದ್ದಾರೆ.
ನಂದಿ ಹಿಲ್ಸ್ನಲ್ಲಿ ಭೂಕುಸಿತವಾಗಲಿದೆ ಎಂಬ ಬೆಚ್ಚಿ ಬೀಳಿಸುವ ವರದಿ ಸದ್ಯ ಸರಕಾರಕ್ಕೆ ತಲುಪಿದೆ. ಚಾರಣಿಗರ ಅತ್ಯಂತ ಇಷ್ಟದ ಜಾಗಕ್ಕೆ ಯಾಕೆ ಈ ರೀತಿಯಾ ಆತಂಕ ಎದುರಾಗಿದೆ ಎಂದರೆ ಪ್ರಕೃತಿ ನಾಶ ಮಾಡಿ ಬೆಳೆಯುತ್ತಿರುವ ಉದ್ಯಮ.
ನಂದಿ ಹಿಲ್ಸ್ ಮೇಲೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ರೆಸಾರ್ಟ್, ಹೋಟೆಲ್‌ಗಳು ಹೆಚ್ಚಾಗ್ತಿವೆ. ಇದರಿಂದ ಪ್ರಕೃತಿಯ ಮೇಲೆ ಒತ್ತಡ ಹೆಚ್ಚಿದೆ. ಈ ಹಿನ್ನೆಲೆ ಭೂಕುಸಿತವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪರಿಸರ ನಾಶದಿಂದ ನಂದಿ ಹಿಲ್ಸ್ ಗೆ ಅಪಾಯವಿದ್ದು ಕಮರ್ಶಿಯಲ್ ಯೋಚನೆ ನಿಲ್ಲಿಸಿ ಎಂದು ವಿಜ್ಞಾನಿಗಳು ಸೂಚಿಸಿದ್ದಾರೆ.
ಸೇವ್ ನಂದಿ ಹಿಲ್ಸ್ ಎಂಬ ಅಭಿಯಾನ ಕೂಡ ಆರಂಭವಾಗಿದ್ದು ಭೂ ಕುಸಿತದ ತೀವ್ರತೆಯನ್ನ ಅರಿಯುವಂತೆ ಸರಕಾರಕ್ಕೆ ಒತ್ತಾಯಿಸಿದ್ದಾರೆ. ಕೂಡಲೆ ನಂದಿ ಹಿಲ್ಸ್ ಪ್ರದೇಶವನ್ನು ಉಳಿಸುವಂತೆ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ, ನಿರ್ಮಾಪಕ ಬಾಬು ರಾಜೇಂದ್ರ ಪ್ರಸಾದ್, ನಿರ್ದೇಶಕ ಆರ್ ಚಂದ್ರ, ಭೂ ವಿಜ್ಞಾನಿಗಳು, ಸೇರಿದ್ದಂತೆ ಅನೇಕ ಸಾಮಾಜಿಕ ಹೋರಾಟಗಾರರು ಸರಕಾರದ ಗಮನ ಸೆಳೆದಿದ್ದಾರೆ.