ಬೆಂಗಳೂರು: ನವರಾತ್ರಿ ಹಬ್ಬದಲ್ಲಿ ಆಚರಿಸಲಾಗುವ ಸಂಭ್ರಮದ ಆಯುಧ ಪೂಜೆ ಅ.11ರ ಶುಕ್ರವಾರ ನೆರವೇರಲಿದೆ. ಈ ಹಿನ್ನಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್‌ಗಳಿಗೆ ಆಯುಧ ಪೂಜೆಗೆ ನೀಡಲಾಗುತ್ತಿದ್ದ ತಲಾ 100 ರೂ.ಗಳನ್ನು 250ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.
100 ರೂ.ಗಳಲ್ಲಿ ಬಸ್‌ನ ಪೂಜೆ ಕುರಿತು ಟೀಕೆ ಬೆನ್ನಲ್ಲೇ ಸಾರಿಗೆ ಇಲಾಖೆ ಸಚಿವರು ದರ ಪರಿಷ್ಕರಣೆ ಮಾಡಲು ಸೂಚಿಸಿದ್ದರು. ಅದರಂತೆ 2024ರ ಅಂದರೆ ಪ್ರಸಕ್ತ ವರ್ಷದಲ್ಲಿ ಆಯುಧಪೂಜೆಗೆ ಪ್ರತಿ ಬಸ್‌ಗೆ ಈಗ ನೀಡಲಾಗುತ್ತಿರುವ 100 ರೂ.ಗಳನ್ನು 250ಕ್ಕೆ ಹೆಚ್ಚಿಸಿ ಸಾರಿಗೆ ಹಾಗೂ ಮುಜರಾಯಿ ಸಚಿವರು ಆದೇಶಿಸಿದ್ದಾರೆ.
ಒಂದು ಘಟಕದಲ್ಲಿ ಸರಿಸುಮಾರು 100 ರಿಂದ 500 ಬಸ್‌ಗಳಿರುತ್ತವೆ. ಈ ಮೊದಲು ಒಂದು ಬಸ್‌ಗೆ 100 ರೂ.ಗಳಂತೆ ಪ್ರತಿ ಘಟಕಕ್ಕೆ/ಕಾರ್ಯಾಗಾರಕ್ಕೆ ನೀಡಲಾಗುತ್ತಿತ್ತು. 2008ರವರೆಗೂ ಪ್ರತಿ ಬಸ್‌ಗೆ 10 ರೂ., 2009ರಲ್ಲಿ ಪ್ರತಿ ಬಸ್‌ಗೆ 30 ರೂ.ಗೆ ಏರಿಸಲಾಯಿತು. 2016ರಲ್ಲಿ ಪ್ರತಿ ಬಸ್‌ಗೆ 50 ರೂ.ಗೆ, 2017ರಲ್ಲಿ ಬಸ್‌ಗೆ 100 ರೂ.ಗೆ ಏರಿಸಲಾಗಿತ್ತು. ಬಸ್‌ವೊಂದಕ್ಕೆ 100 ರೂ. ನೀಡುವ ಮೊತ್ತವು 2023ರವರೆಗೂ ಇತ್ತು.