ಪೋಷಕರ ವಿಚ್ಛೇದನ: ಅಜ್ಜಿಯ ಆಸರೆಯಲ್ಲಿ ಬೆಳೆದ ರತನ್ ಟಾಟಾ: ಇಂಡೋ-ಚೀನಾ ಯುದ್ಧ ಪರಿಣಾಮ, ಟಿನೇಜ್ ಲವ್ ಬ್ರೇಕ್..!: ಹೆತ್ತವರಿಲ್ಲದೆ, ಪ್ರೀತಿಸಿದವಳಿಲ್ಲದೆ ಒಂಟಿಯಾನ: ಸಂಪಾದನೆಗಳೆಲ್ಲ ದಾನ

ಉದ್ಯಮ ಲೋಕದ ದಿಗ್ಗಜ ರತನ್ ಟಾಟಾ ಕೊನೆಯುಸಿರೆಳೆದು ಜನ ಶೋಕ ಸಾಗರದಲ್ಲಿ ಮುಳುಗುವಂತೆಯಾಗಿದೆ. ಜಗತ್ತಿನ ಮೂಲೆ ಮೂಲೆಯಲ್ಲೂ ಮನೆ ಮಾತಾಗಿದ್ದ ಇವರು ಇನ್ನು ಮುಂದೆ ನೆನಪು ಮಾತ್ರ. ಉಸಿರು ನಿಂತರು ಹೆಸರು ಉಳಿಸಿ ಹೋದ ಮಹಾನ್ ಮೇಧಾವಿಯ ಬದುಕಿನ ಕೆಲವು ರೋಚಕ ವಿಚಾರಗಳು ಆಶ್ಚರ್ಯ ಹುಟ್ಟಿಸುತ್ತವೆ. ಇವರ ಬಾಲ್ಯ ಹಾಗೂ ಯವ್ವನ ಹೇಗಿತ್ತು..?

1937ರ ಡಿಸೆಂಬರ್ 28ರಂದು ಶ್ರೀಮತಿ ಸೂನಿ ಮತ್ತು ನಾವಲ್ ಹರ್ಮುಸ್ ಜಿ ಟಾಟಾ ದಂಪತಿಯ ಹಿರಿಯ ಮಗನಾಗಿ ರತನ್ ಟಾಟಾ ಬೊಂಬಾಯಿನಲಿ ಜನಿಸಿದರು. ಮುಂಬೈನಲ್ಲೇ ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಮುಗಿಸಿ, ಕಾರ್ನೆಲ್ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಪದವಿ ಪಡೆದುಕೊಂಡು 1962 ರಲ್ಲಿ ಕಾರ್ಯನಿರ್ವಾಹಕ ಜವಾಬ್ದಾರಿ ವಹಿಸಿಕೊಂಡು ಟಾಟಾ ಗ್ರೂಪ್‌ಗೆ ಸೇರ್ಪಡೆಗೊಂಡಿದ್ದರು.

ವಿಪರ್ಯಾಸ ಅಂದ್ರೆ, ಚಿಕ್ಕ ವಯಸ್ಸಲ್ಲೇ ರತನ್ ಟಾಟಾ ಪೋಷಕರು ದೂರವಾದ್ರು. ತನ್ನ ಅಜ್ಜಿ ರತಂಜಿ ಟಾಟಾ ಜೊತೆಯೇ ರತನ್ ಟಾಟಾ ಬಾಲ್ಯ ಕಳೆಯುಂವತಾಯ್ತು.
ಯವ್ವನದಲ್ಲಿ ಅರಳಿದ ಇವರ ಪ್ರೀತಿಯ ಕಥೆ ಯುದ್ಧ ಪರಿಣಾಮಕ್ಕೆ ಕಮರಿ ಹೋಯಿತು ಅನ್ನೋದೆ ನೋವಿನ ಸಂಗತಿ. ಕೆಲ ವರ್ಷಗಳ ಹಿಂದಷ್ಟೇ ‘ಹ್ಯೂಮನ್ಸ್ ಆಫ್ ಬಾಂಬೆ ಹೆಸರಿನ ಫೇಸ್‌ಬುಕ್ ಪೇಜ್’ನಲ್ಲಿ ತಮ್ಮ ಲವ್ ಸ್ಟೋರಿಯನ್ನು ಅವರು ಹಂಚಿಕೊಂಡಿದ್ದರು. ಆಗ ಅವರು ಲಾಸ್ ಏಂಜಲೀಸ್‌ನಲ್ಲಿ ಉದ್ಯೋಗಿಯಾಗಿದ್ದರು.

“ಕಾಲೇಜಿನ ನಂತರ, ನಾನು ಲಾಸ್ ಏಂಜಲೀಸ್‌ನಲ್ಲಿನ ಆರ್ಕಿಟೆಕ್ಚರ್ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಬಂದೆ. ಅಲ್ಲಿ ನಾನು 2 ವರ್ಷಗಳ ಕಾಲ ಕೆಲಸ ಮಾಡಿದೆ. ಸ್ವಂತ ಕಾರು ಖರೀದಿಸಿದೆ, ನನ್ನ ಕೆಲಸವನ್ನು ಇಷ್ಟಪಟ್ಟೆ. ಲಾಸ್ ಏಂಜಲೀಸ್‌ನಲ್ಲಿ ನಾನು ಒಬ್ಬಾಕೆಯನ್ನು ಪ್ರೀತಿಸುತ್ತಿದ್ದೆ ಮತ್ತು ಬಹುತೇಕ ನಬ್ಬಿಬ್ಬರ ಮದುವೆಯಾಗುವುದು ಖಚಿತವಾಗಿತ್ತು. ಆದರೆ ಅದೇ ಸಮಯದಲ್ಲಿ ನನ್ನ ಅಜ್ಜಿಯ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ಅವರನ್ನು ನೋಡಲೆಂದು ನಾನು ತಾತ್ಕಾಲಿಕವಾಗಿ ತಾಯ್ನಾಡಿಗೆ ಹಿಂದಿರುಗಲು ನಿರ್ಧಾರ ಮಾಡಿದ್ದೆ. ನಾನು ಅಜ್ಜಿಯನ್ನು ನೋಡಲು ಬಂದೆ. ನಾನು ಮದುವೆಯಾಗಬಯಸಿದ್ದ ಹುಡುಗಿಯೂ ನನ್ನೊಂದಿಗೆ ಭಾರತಕ್ಕೆ ಬರುತ್ತಾಳೆಂದು ನಾನು ಭಾವಿಸಿದ್ದೆ. ಆದರೆ ಆಕೆ ಭಾರತಕ್ಕೆ ಬರಲಿಲ್ಲ. 1962ರ ಇಂಡೋ-ಚೀನಾ ಯುದ್ಧದ ಕಾರಣ ಪೋಷಕರು ಆಕೆಯನ್ನು ಎಲ್ಲಿಗೂ ಹೋಗಲು ಬಿಡಲಿಲ್ಲ. ಇದಾದ ಬಳಿಕ ನಮ್ಮ ಸಂಬಂಧವೇ ದೂರವಾಯಿತು. ಇದಾದ ಮೇಲೆ ನನ್ನ ಬದುಕಿನಲ್ಲಿ ಬಹಳ ಮಂದಿ ಮಹಿಳೆಯರು ಬಂದು ಹೋದರು. ಆದರೆ ಯಾರೂ ತನ್ನ ಕೈಹಿಡಿಯಬಹುದು ಎಂದು ನನಗೆ ಅನಿಸಲಿಲ್ಲʼವೆಂದು ರತನ್ ಟಾಟಾ ಹೇಳಿಕೊಂಡಿದ್ದರು.

ರತನ್ ಟಾಟಾ ಕೊಡುಗೈ ದಾನಿ. ಬಡವರ ಸೇವೆಯಲ್ಲೇ ಜೀವನ ಕಳೆದ ಮಹಾನ್ ಮೇಧಾವಿ. 2024 ರಲ್ಲಿ ಅವರ ಒಟ್ಟಾರೆ ನಿವ್ವಳ ಆಸ್ತಿ ಮೊತ್ತವು 3,800 ಕೋಟಿ ರೂಪಾಯಿ ಆಗುತ್ತದೆ. ಇದರಲ್ಲಿ ದಾನ ಸೇವಾ ಕಾರ್ಯಗಳಿಗೆ ನೀಡಿದ ಹಣ ಸೇರ್ಪಡೆಯಾಗಿಲ್ಲ.

ದೇಶದ ಶ್ರೀಮಂತ ಉದ್ಯಮಿಯಾಗಿರೋ ರತನ್ ಟಾಟಾರ ಹೆಸರು ಶ್ರೀಮಂತರ ಪಟ್ಟಿಯಲ್ಲಿಲ್ಲ. ರತನ್ ಟಾಟಾ ಅವರು ತಮ್ಮ ಸಂಪಾದನೆಯ ಶೇ.60 ಕ್ಕೂ ಹೆಚ್ಚು ಹಣವನ್ನು ಟಾಟಾ ಚಾರಿಟಿಗೆ ನೀಡುತ್ತಿದ್ದರು. ಕೋವಿಡ್ ಹೋರಾಟಕ್ಕೆ 1,500 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. ಇಂತಹ ಅಪ್ರತಿಮ ವ್ಯಕ್ತಿ ಇನ್ನು ನೆನಪು ಮಾತ್ರ.

error: Content is protected !!