ಹರಿಯಾಣ ಚುನಾವಣೆ: ವಿನೇಶ್ ಫೋಗಟ್ ಗೆ ಚೊಚ್ಚಲ ಗೆಲುವು: ರಾಜಕೀಯ ಅಖಾಡದಲ್ಲೂ ಮಾಜಿ ಕುಸ್ತಿ ಪಟುವಿಗೆ ಜಯ

ಚಂಢೀಗಢ: ಹರಿಯಾಣದ ಜಿಂದ್ ಜಿಲ್ಲೆಯ ಜೂಲಾನಾ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ ಮಾಜಿ ಕುಸ್ತಿ ಪಟು ವಿನೇಶ್ ಫೋಗಟ್ ಚೊಚ್ಚಲ ಗೆಲುವು ಪಡೆದಿದ್ದಾರೆ.

ಚುನಾವಣಾ ಆಯೋಗದ ಜಾಲತಾಣದ ಪ್ರಕಾರ, ವಿನೇಶ್ ಫೋಗಟ್ ತಮ್ಮ ಎದುರಾಳಿ ಬಿಜೆಪಿ ಅಭ್ಯರ್ಥಿ ಯೋಗೇಶ್ ಕುಮಾರ್ ಅವರ ವಿರುದ್ಧ 6 ಸಾವಿರ ಮತಗಳ ಅಂತರದಿAದ ಜಯ ಸಾಧಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ವಿನೇಶ್ ಅವರ ಎದುರಾಳಿ, ಬಿಜೆಪಿಯ ಸ್ಪರ್ಧಿ ಯೋಗೇಶ್ ಬೈರಾಗಿ ಒಂಬತ್ತು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದರು. ಹರಿಯಾಣ ಬಿಜೆಪಿ ಯುವ ಘಟಕದ ಅಧ್ಯಕ್ಷರೂ ಆಗಿದ್ದಾರೆ.

ಚುನಾವಣಾ ಗೆಲುವು ಪಡೆದ ವಿನೇಶ್ ಫೋಗಟ್ ಮಾತನಾಡಿ, “ಇದು ಎಲ್ಲಾ ಯುವತಿಯರ ಗೆಲುವು. ಹೋರಾಟಕ್ಕೆ ನಿರ್ಧರಿಸಿದ ಎಲ್ಲಾ ಮಹಿಳೆಯರ ಗೆಲುವು. ಈ ದೇಶ ಕೊಟ್ಟ ಪ್ರೀತಿ ಹಾಗೂ ನಂಬಿಕೆಯನ್ನು ಉಳಿಸುತ್ತೇನೆ” ಎಂದಿದ್ದಾರೆ.

error: Content is protected !!