ಚರಂಡಿಗೆ ಬಿದ್ದ ಸಿಮೆಂಟ್ ತುಂಬಿದ ಈಚರ್ ಲಾರಿ..!: ಪುಂಜಾಲಕಟ್ಟೆ-ಚಾರ್ಮಾಡಿ ರಾ.ಹೆ ಕಳಪೆ ಕಾಮಗಾರಿ ಬಟಾಬಯಲು: ನೋಡೋರಿಲ್ಲಾ.. ಕೇಳೋರಿಲ್ಲ.. ಹೆದ್ದಾರಿಯ ಭವಿಷ್ಯ ಹೇಗೋ..?

ಬೆಳ್ತಂಗಡಿ: ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟಿಯ ಹೆದ್ದಾರಿ ಕಾಮಗಾರಿ ಆರಂಭವಾದಾಗಿಂದ ದಿನನಿತ್ಯ ವಾಹನ ಸವಾರರು ನರಕಯಾತನೆ ಅನುಭವಿಸುತ್ತಿದ್ದಾರೆ. ಕಳಪೆ ಕಾಮಗಾರಿ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೆ ಸಾಕ್ಷಿ ಸಮೇತವಾಗಿ ಆ ಸತ್ಯ ಬಯಲಾಗಿದೆ.

ಅ.08ರಂದು ಉಜಿರೆಯ ಎಂ.ಜಿ. ಟ್ರೇಡರ್ಸ್

ಬಳಿ ಸಿಮೆಂಟ್ ತುಂಬಿದ ಲಾರಿಯೊಂದು ಚರಂಡಿಗೆ ಬಿದ್ದ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ನಿರ್ಮಿಸಲಾಗಿದ್ದ ಚರಂಡಿಗೆ ಬಿದ್ದು ಲಾರಿ ಚಕ್ರ ಅಲ್ಲೇ ಸಿಕ್ಕಿಹಾಕಿಕೊಂಡಿದೆ.

ಪ್ರತೀ ನಿತ್ಯ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ಸಂಚರಿಸುವ ವಾಹನ ಸವಾರರು ರಾಷ್ಟೀಯ ಹೆದ್ದಾರಿಯ ಕಾಮಗಾರಿಗೆ ಬೇಸತ್ತು, ಮೊದಲಿದ್ದ ರಸ್ತೆಯೇ ಚೆನ್ನಾಗಿತ್ತು, ರಾಷ್ಟೀಯ ಹೆದ್ದಾರಿ ಬೇಡವಾಗಿತ್ತು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಕಾಮಗಾರಿಗೆ ಬಂದ ಅನುದಾನದಲ್ಲಿ ಕೋಟಿ, ಕೋಟಿ ಪರ್ಸಂಟೇಜ್ ಕೇಳಿದ್ದಾರೆ, ಬಿಡುಗಡೆಯಾದ ಅನುದಾನ ಹೆಚ್ಚಿದೆ, ಆದರೆ ಅಷ್ಟು ಕಾಮಗಾರಿ ನಡೆದೇ ಇಲ್ಲ ಎಂಬ ಆರೋಪಗಳೂ ಇದೆ.

ಒಟ್ಟಿನಲ್ಲಿ ಕಾಮಗಾರಿ ಸರಿಯಾಗಿದೆಯೋ, ಇಲ್ಲವೋ, ಎಂಬುದನ್ನು ನೋಡೋರಿಲ್ಲಾ.. ಕೇಳೋರಿಲ್ಲ ಎಂಬತ್ತಾಗಿದ್ದು ಹೆದ್ದಾರಿಯ ಭವಿಷ್ಯ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಸೃಷ್ಟಿಯಾಗಿದೆ.

error: Content is protected !!