ಮಡಂತ್ಯಾರು: ಮನೆಯ ದಾರಂದ ಬಿದ್ದು 6 ವರ್ಷ ಮಗು ಸಾವನ್ನಪ್ಪಿದ ಘಟನೆ ಪುತ್ತಿಲ ಗ್ರಾಮದ ಕುಂಡಡ್ಕ ಸಮೀಪದ ಕೇರ್ಯಾ ಕೊನಲೆ ಎಂಬಲ್ಲಿ ಸಂಭವಿಸಿದೆ.
ಕೊನಲೆ ನಿವಾಸಿ ಹಾರೀಸ್ ಮುಸ್ಲಿಯಾರ್ ಮತ್ತು ಅಸ್ಮಾ ದಂಪತಿಗಳ 4 ಹೆಣ್ಣು ಮಕ್ಕಳಲ್ಲಿ 3ನೇ ಮಗು ಅಲ್ಫಿಯಾ (6) ಮೃತ ರ್ದುದೈವಿ.
ಕೊನಲೆ ನಿವಾಸಿ ಹಾರೀಸ್ ಮುಸ್ಲಿಯಾರ್ ನೂತನ ಮನೆಯನ್ನು ನಿರ್ಮಾಣ ಮಾಡುತ್ತಿದ್ದು, ಮನೆಯ ಮುಖ್ಯ ದ್ವಾರಕ್ಕೆ ದಾರಂದ ಜೋಡಿಸುವ ಕೆಲಸವನ್ನು ಮಾಡುವುದ್ದಕ್ಕಾಗಿ ಮನೆಯ ಪಕ್ಕದಲ್ಲಿ ದಾರಂದವನ್ನು ಜೋಡಣೆ ಮಾಡಿದರು. ಈ ಸಂದರ್ಭದಲ್ಲಿ ಮಗು ಅದರ ಪಕ್ಕದಲ್ಲಿ ಆಟವಾಡುತ್ತಿರುವಾಗ ದಾರಂದವು ಆಯಾ ತಪ್ಪಿ ಮಗುವಿನ ತಲೆಗೆ ಬಿದ್ದು ಗಂಭೀರ ಗಾಯಗೊಂಡಿತು.
ತಕ್ಷಣ ಮಗುವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಮಗು ದಾರಿ ಮಧ್ಯೆ ಅಸುನೀಗಿರುವುದಾಗಿ ತಿಳಿದು ಬಂದಿದೆ.