ಕೇಕ್‌ನಲ್ಲೂ ಕ್ಯಾನ್ಸರ್ ಕಾರಕ ಅಂಶ ಪತ್ತೆ!: ದಯವಿಟ್ಟು ಈ ರೀತಿಯ ಕೇಕ್‌ಗಳನ್ನು ತಿನ್ನಲೆ ಬೇಡಿ: ಕೇಕ್ ತಯಾರಿಕರಿಗೆ ಆಹಾರ ಇಲಾಖೆ ಹೇಳಿದ್ದೇನು..?

ಸಾಂದರ್ಭಿಕ ಚಿತ್ರ

ಇತ್ತೀಚೆಗೆ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಪಾನ್, ಗುಟ್ಕಾ, ತಿನ್ನೋರಿಗೆ, ಬೀಡಿ, ಸಿಗರೇಟ್ ಸೇದೋರಿಗೆ ಮಾತ್ರ ಮೊದಲು ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಅವೆಲ್ಲ ಅಭ್ಯಾಸ ಇಲ್ಲದ ಮಹಿಳೆ, ಪುರುಷರಲ್ಲಿ, ಮಕ್ಕಳಲ್ಲಿ ಕ್ಯಾನ್ಸರ್ ಖಾಯಿಲೆ ಕಾಣಿಸತೊಡಗಿದೆ. ಇದಕ್ಕೆ ನಾವು ತಿನ್ನುವ ಆಹಾರದಲ್ಲಿರುವ ಬಣ್ಣ ಮತ್ತು ರುಚಿಗಾಗಿ ಬಳಸುವ ವಸ್ತುಗಳೇ ಕಾರಣ ಆಗುತ್ತಿರುವುದು ಭಯಾನಕ.

ಗೋಬಿ, ಕಬಾಬ್ ಮತ್ತು ಪಾನಿಪುರಿಗೆ ಬಳಸುವ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿವೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಈ ಮೊದಲು ತಿಳಿಸಿತ್ತು. ಇದೀಗ, ಕೇಕ್‌ಗೆ ಬಳಸುವ ಪದಾರ್ಥಗಳಲ್ಲೂ ಕ್ಯಾನ್ಸರ್‌ಕಾರಕ ಅಂಶ ಪತ್ತೆಯಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ತಿಳಿಸಿದೆ. ಹೀಗಾಗಿ ಕೇಕ್ ತಿನ್ನೋ ಮುಂಚೆ ಜನ ಯೋಚಿಸಬೇಕಿದೆ. ಹಾಗಾದ್ರೆ ಎಲ್ಲಾ ಕೇಕ್ ನಲ್ಲೂ ಕ್ಯಾನ್ಸರ್ ಅಂಶ ಇದೆಯಾ..? ಆಹಾರ ಇಲಾಖೆ ಏನು ಹೇಳಿದೆ. ಮುಂದೆ ಓದಿ..

ಕೇಕ್‌ಗೆ ಬಳಸುವ ಪದಾರ್ಥಗಳು ಕಲಬರಿಕೆಯಿಂದ ಕೂಡಿವೆ ಎಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಕೇಕ್ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲನೆಗೆ ಒಳಪಡಿಸಿದರು. ಆಗ 12 ಮಾದರಿ ಕೇಕ್‌ಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿವೆ. ವಿಶೇಷವಾಗಿ ರೆಡ್ ವೆಲ್ವೆಟ್ ಹಾಗೂ ಬ್ಲಾಕ್ ಫಾರೆಸ್ಟ್ ಕೇಕ್‌ನಲ್ಲಿ ಹೆಚ್ಚು ಬಣ್ಣ ಬಳಕೆ ಮಾಡುವುದರಿಂದ, ಇದು ಮನುಷ್ಯನ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹೀಗಾಗಿ ರುಚಿ ಎನಿಸುವ ಕೇಕ್ ತಿನ್ನುವ ಮುನ್ನ ಎಚ್ಚರಿಕೆ ವಹಿಸಬೇಕಿದೆ. 12 ಮಾದರಿಗಳಲ್ಲಿ ಅಲೂನಾ ರೆಡ್, ಸನ್ ಸೆಟ್ ಯೆಲ್ಲೋ, ಪೊನುಸೆಯಾ 4ಖ , ಕಾರ್ಮಿಯೋಸೆನ್ ಎಂಬ ಅಂಶ ಪತ್ತೆಯಾಗಿದೆ.
ಹೀಗಾಗಿ ರೆಡ್ ವೆಲ್ವೆಟ್ ಹಾಗೂ ಬ್ಲಾಕ್ ಫಾರೆಸ್ಟ್ ಕೇಕ್‌ಗೆ ಬಣ್ಣ ಬಳಕೆಗೆ ನಿರ್ಬಂಧಿಸಲಾಗಿದೆ. ಈ ಕೃತಕ ಬಣ್ಣಗಳಿಂದ ಆರೋಗ್ಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹೀಗಾಗಿ ಆಹಾರ ಸುರಕ್ಷತಾ ಇಲಾಖೆಯ ಸೂಚನೆ ಪಾಲಿಸುವಂತೆ ಕೇಕ್ ತಯಾರಿಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

error: Content is protected !!