ಪಿಂಚಣಿಗಾಗಿ 70 ವರ್ಷದ ವೃದ್ಧೆಯೊಬ್ಬರು ಪಂಚಾಯತ್ ಕಚೇರಿಗೆ ತೆವಳುತ್ತಾ ಬಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಡಿಶಾದಲ್ಲಿ ನಡೆದ ಘಟನೆ ಇದಾಗಿದ್ದು ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ಮಹಿಳೆ ಅಪಘಾತವೊಂದರಲ್ಲಿ ಕಾಲಿನ ಸ್ವಾಧೀನ ಕಳೆದುಕೊಂಡಿದ್ದು ನಿಂತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈ ಮಹಿಳೆ ಜೀವನೋಪಾಯಕ್ಕಾಗಿ ಪಿಂಚಣಿಯನ್ನೇ ಅವಲಂಬಿಸಿದ್ದಾರೆ. ಸರ್ಕಾರವು ಫಲಾನುಭವಿಗಳ ಬಾಗಿಲಿಗೇ ಕಲ್ಯಾಣ ಪಿಂಚಣಿಗಳನ್ನು ತಲುಪಿಸಬೇಕೆಂಬ ನಿಯಮವಿದ್ದರೂ ಈ ಮಹಿಳೆ ಪಂಚಾಯತ್ ಕಚೇರಿಗೆ ಅಲೆಯುವಂತಾಗಿದೆ. ಇದು ಆ ಮಹಿಳೆಯ ಕೈ ಹಾಗೂ ಕಾಲಿನಲ್ಲಿ ಗುಳ್ಳೆಗಳು ಬರುವಂತೆ ಮಾಡಿದೆ.
ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿ ಪಿಂಚಣಿ ಪಡೆಯಲು ಕಚೇರಿಗೆ ಬರುವಂತೆ ಹೇಳಿದ್ದರು. ಹೀಗಾಗಿ ಬೇರೆ ದಾರಿ ಇಲ್ಲದೆ ಸಹಾಯ ಮಾಡುವವರು ಯಾರೂ ಇಲ್ಲದೆ 2 ಕಿ.ಮೀ ದೂರ ತೆವಳುತ್ತಾ ಬಂದಿದ್ದಾರೆ.
ಈ ಬಗ್ಗೆ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯನ್ನು ಪ್ರಶ್ನಿಸಿದಾಗ ಘಟನೆಯನ್ನು ಒಪ್ಪಿಕೊಂಡರೂ ಮಹಿಳೆಯ ಕಷ್ಟದ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ಹೇಳಿದರು. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ, ಮುಂದಿನ ತಿಂಗಳಿನಿAದ ಆಕೆಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಮಾಡುತ್ತೇವೆ ಎಂದು ಪಂಚಾಯತ್ ತಿಳಿಸಿದೆ.