ವರ್ಷದ ಕೊನೆಯ ಮತ್ತು ಎರಡನೇ ಸೂರ್ಯಗ್ರಹಣ ಅಕ್ಟೋಬರ್ 2ರಂದು ಸಂಭವಿಸಲಿದೆ.
ಈ ಗ್ರಹಣ ಜಗತ್ತಿನ ವಿವಿಧ ದೇಶಗಳಲ್ಲಿ ಗೋಚರಿಸಲಿದೆ. ದಕ್ಷಿಣ ಅಮೆರಿಕ, ಉತ್ತರ ಅಮೆರಿಕದ ದಕ್ಷಿಣ ಭಾಗಗಳು, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಸಾಗರ, ಚಿಲಿ, ಅರ್ಜೆಂಟೀನಾ, ಬ್ರೆಜಿಲ್, ಮೆಕ್ಸಿಕೊ, ಪೆರು, ನ್ಯೂಜಿಲೆಂಡ್ ಹಾಗು ಫಿಜಿ ಮೊದಲಾದ ದೇಶಗಳಲ್ಲಿ ಗ್ರಹಣ ಕೆಲಕಾಲ ಗೋಚರಿಸಲಿದೆ. ದಕ್ಷಿಣ ಚಿಲಿ ಮತ್ತು ದಕ್ಷಿಣ ಅರ್ಜೆಂಟೀನಾದಲ್ಲಿ ಮಾತ್ರ ಪೂರ್ಣವಾಗಿ ಗೋಚರಿಸುತ್ತದೆ. ಸೂರ್ಯಗ್ರಹಣದ ಒಟ್ಟು ಅವಧಿ 6 ಗಂಟೆ 4 ನಿಮಿಷ ಆಗಿರುತ್ತದೆ.
ವರ್ಷದ ಕೊನೆಯ ಸೂರ್ಯಗ್ರಹಣಕ್ಕೆ ಸಂಬAಧಿಸಿದAತೆ ರಿಂಗ್ ಆಫ್ ಫೈರ್‌ನ ದೃಶ್ಯವು ಭಾರತದಲ್ಲಿ ಗೋಚರಿಸುತ್ತದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಇದೆ. ವಿಶೇಷವೆಂದರೆ, ಭಾರತದಲ್ಲಿ ಚಂದ್ರಗ್ರಹಣ ಹೇಗೆ ಗೋಚರಿಸಲಿಲ್ಲವೋ ಅದೇ ರೀತಿ ಸೂರ್ಯಗ್ರಹಣವೂ ಗೋಚರಿಸುದಿಲ್ಲ.
ಸೂರ್ಯಗ್ರಹಣ ಸಂದರ್ಭ ಸೂತಕ ಎಂದು ಆಚರಿಸಲಾಗುತ್ತದೆ. ಆದರೆ ಭಾರತದಲ್ಲಿ ಈ ಬಾರಿ ಗ್ರಹಣ ಗೋಚರವಾಗದ ಹಿನ್ನೆಲೆ ಸೂತಕ ಇರುವುದಿಲ್ಲ.