ಮುಂಬೈ: ತಿರುಪತಿ ದೇವಾಲಯದಲ್ಲಿ ನೀಡಲಾಗುವ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಕೆ ದೃಢ ಪಟ್ಟ ಬೆನ್ನಲ್ಲೆ ಮುಂಬಯಿಯ ಹಿಂದೂ ದೇವಾಲಯದ ಪ್ರಸಾದಲ್ಲಿ ಇಲಿ ಮರಿಗಳು ಪತ್ತೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಮುಂಬಯಿಯ ಶ್ರೀ ಸಿದ್ಧಿ ವಿನಾಯಕ ದೇವಾಲಯದ್ದೆಂದು ಹೇಳಲಾದ ಪ್ರಸಾದದ ಪೊಟ್ಟಣಗಳ ಮೇಲೆ ಇಲಿ ಮರಿಗಳು ಪತ್ತೆಯಾಗಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಶ್ರೀ ಸಿದ್ಧಿ ವಿನಾಯಕ ದೇವಾಲಯದ ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿ “ದೇವಾಲಯದ ಲಡ್ಡು ಪ್ರಸಾದ ತಯಾರಿಸುವ ಸ್ಥಳ ಶುದ್ಧವಾಗಿದೆ. ಆದರೆ ವೀಡಿಯೋದಲ್ಲಿರುವ ಸ್ಥಳವು ಕೊಳಕಾಗಿದ್ದು, ಇದು ದೇವಾಲಯದ ಹೊರಗೆಲ್ಲೋ ಚಿತ್ರೀಕರಿಸಲಾದ ವೀಡಿಯೋ ಎಂದು ಹೇಳಿದೆ”. ಜೊತೆಗೆ ಈ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದೆ.