ಮಂಗಳೂರು: ವಿಭಿನ್ನ ಪ್ರಾಣಿ, ಪಕ್ಷಿಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿರುವ ಪಿಲಿಕುಳಕ್ಕೆ ಪ್ರಾಣಿ ವಿನಿಮಯ ಯೋಜನೆಯಡಿಯಲ್ಲಿ ದೇಶದ ವಿವಿಧ ಮೃಗಾಲಯಗಳಿಂದ ಅಪರೂಪದ ಪ್ರಾಣಿ, ಪಕ್ಷಿ ಹಾಗೂ ಉರಗಳನ್ನು ತರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮದ್ರಾಸ್ ಕ್ರೊಕೊಡೈಲ್ ಬ್ಯಾಂಕ್‌ನಿAದ ‘ಹಳದಿ ಅನಕೊಂಡ’ ಉರಗಗಳು ಪಿಲಿಕುಳಕ್ಕೆ ಆಗಮಿಸಲಿವೆ. ಇದರ ಬದಲಿಗೆ ಸರ್ಪ ಮತ್ತು ವಿಷಕಾರಿ ಹಾವುಗಳನ್ನು ನೀಡುವ ಯೋಜನೆ ಇದೆ.
ಪಂಜಾಬ್‌ನ ಮಹೇಂದ್ರ ಚೌದರಿ ಮೃಗಾಲಯದಿಂದ ಅಳಿವಿನಂಚಿನಲ್ಲಿರುವ ತೋಳಗಳು, ಫರಿಯಾಲ್ ಮೊಸಳೆ, ಅಪರೂಪದ ಪಕ್ಷಿಗಳು ಬರಲಿವೆ. ಬದಲಿಗೆ ಹೆಚ್ಚುವರಿ ಪ್ರಾಣಿಗಳಾದ ಧೋಳ (ಕಾಡು ನಾಯಿ) ರೆಟಿಕ್ಯುಲೆಟೆಡ್ ಹೆಬ್ಬಾವು, ಮುಸಕೋಟಿ ಬಾತುಕೋಳಿ ಹಾಗೂ ಹೈನಾ (ಕತ್ತೆ ಕಿರುಬ)ಗಳನ್ನು ನೀಡಲಾಗುವುದು.
ಒರಿಸ್ಸಾದ ನಂದನ್ ಕಾನನ್ ಮೃಗಾಲಯದಿಂದ ಗಂಡು ಏಷ್ಯಾಟಿಕ್ ಸಿಂಹ, ಅಳಿವಿನಂಚಿನಲ್ಲಿರುವ ತೋಳ, ಘರಿಯಾಲ್ ಮೊಸಳೆ, ಅಪರೂಪದ ಪಕ್ಷಿಗಳು ಆಗಮಿಸಲಿವೆ.
ಬಾಂಬೈನ ಬೈಕುಳ ಮೃಗಾಲಯದಿಂದ ದಕ್ಷಿಣ ಅಮೆರಿಕ ಮೂಲದ ಪೆಂಗ್ವಿನ್ ಪಕ್ಷಿಗಳನ್ನು ತರಿಸಲಾಗುವುದು. ಪಿಲಿಕುಳದಿಂದ ಮಾರ್ಷ ಮೊಸಳೆಗಳನ್ನು ಬದಲಿಗೆ ನೀಡಲಾಗುವುದು.
ಆಂಧ್ರ ಪ್ರದೇಶದ ತಿರುಪತಿ ಮೃಗಾಲಯದಿಂದ ಅಪರೂಪದ ಪಕ್ಷಿಗಳನ್ನು ತರಿಸಲಾಗುವುದು. ಬದಲಿಗೆ ಮರಬೆಕ್ಕು ಇತ್ಯಾದಿಗಳನ್ನು ನೀಡಲಾಗುವುದು.
ತಮಿಳು ನಾಡಿನ ವನ್ಡಲೂರ್ ಮೃಗಾಲಯದಿಂದ ಅಳಿವಿನಂಚಿನಲ್ಲಿರುವ ತೋಳಗಳು, ಹಾಗೂ ಅಪರೂಪದ ಪಕ್ಷಿಗಳನ್ನು ತರಿಸಲಾಗುವುದು. ಬದಲಿಗೆ ಕಾಳಿಂಗ ಸರ್ಪ ಮತ್ತು ಹೈನಾ (ಕತ್ತೆಕಿರುಬ) ಗಳನ್ನು ನೀಡಲಾಗುವುದು ಎಂದು ತಿಳಿದು ಬಂದಿದೆ.