ಮಂಡ್ಯ: ಗಣೇಶ ಮೂರ್ತಿನಿಮಜ್ಜನೆ ಮೆರವಣಿಗೆಯ ವೇಳೆ ಕಲ್ಲು ತೂರಾಟ ನಡೆದಿರುವ ಘಟನೆ ನಾಗಮಂಗಲದಲ್ಲಿ ಸೆ.11ರ ರಾತ್ರಿ ಸಂಭವಿಸಿದೆ.
ನಾಗಮಂಗಲದ ಬದರಿಕೊಪ್ಪಲಿನಲ್ಲಿ ಗಣೇಶ ಮರ‍್ತಿ ಪ್ರತಿಷ್ಠಾಪಿಸಲಾಗಿತ್ತು. ನಿನ್ನೆ ರಾತ್ರಿ ಮರ‍್ತಿಯ ನಿಮಜ್ಜನಾ ಮೆರವಣಿಗೆ ಅನ್ಯಕೋಮಿನ ಪ್ರರ‍್ಥನಾ ಮಂದಿರದ ಬಳಿ ಸಾಗುತ್ತಿತ್ತು. ಈ ಸಂರ‍್ಭದಲ್ಲಿ ಕೆಲವು ಕಿಡಿಗೇಡಿಗಳು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ದುಷ್ರ‍್ಮಿಗಳು ಅಂಗಡಿಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದು ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್‌ಪಿ ಮಲ್ಲಿಕರ‍್ಜುನ್ ಬಾಲದಂಡಿ ಅವರು “ಗಣೇಶ ಮರ‍್ತಿಯ ಮೆರವಣಿಗೆ ಹೆಚ್ಚು ಹೊತ್ತು ಮಸೀದಿಯ ಮುಂದೆ ನಿಂತಿರುವುದಕ್ಕೆ ಎರಡು ಕೋಮುಗಳ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಈ ವೇಳೆ ಪೊಲೀಸರು ಗುಂಪು ಚದುರಿಸಲು ಲಾಠಿ ಚರ‍್ಜ್ ಮಾಡಿದರು. ಬಳಿಕ ಪೊಲೀಸರು ಹೊಡೆದರೆಂದು ಠಾಣೆ ಮುಂದೆ ಒಂದು ಗುಂಪಿನ ಯುವಕರು ಬಂದು ಪ್ರತಿಭಟನೆ ಮಾಡಿದ್ದಾರೆ. ಇನ್ನೊಂದೆಡೆ ಇನ್ನೊಂದು ಕೋಮಿನವರು ಕಲ್ಲು ತೂರಾಟ ಮಾಡಿದರು. ಎರಡು ಬೈಕ್ ಮತ್ತು ನಾಲ್ಕೈದು ಅಂಗಡಿಗಳಿಗೂ ಬೆಂಕಿ ಹಚ್ಚಿದ್ದಾರೆ. ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದೀಗ ಪರಿಸ್ಥಿತಿ ಹತೋಟಿಯಲ್ಲಿದೆ. ಪ್ರಕರಣದ ಬಗ್ಗೆ ತನಿಖೆ ಮಾಡುತ್ತಿದ್ದೇವೆ” ಎಂದಿದ್ದಾರೆ.
“ಘಟನಾ ಸ್ಥಳದಲ್ಲಿ ಮೂರು ದಿನಗಳವರೆಗೆ 144 ಸೆಕ್ಷನ್ ಜಾರಿ ಮಾಡಿದ್ದೇವೆ. ಗಲಾಟೆಯ ವೇಳೆ ಮಚ್ಚು, ಲಾಂಗು, ಪೆಟ್ರೋಲ್ ಬಾಂಬ್ ಬಳಸಿರುವ ಬಗ್ಗೆ ಮಾಹಿತಿ ಇಲ್ಲ. ಕೆಲವರನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದೇವೆ” ಎಂದು ದಕ್ಷಿಣ ವಲಯದ ಐಜಿಪಿ ಬೋರಲಿಂಗಯ್ಯ ತಿಳಿಸಿದ್ದಾರೆ.