ಬೆಳ್ತಂಗಡಿ: ಕಳೆದ ಆರು ದಿನಗಳ ಹಿಂದೆಯಷ್ಟೇ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿನೊಳಗೆ ಸೆರೆಯಾಗಿದ್ದು ಸ್ಥಳೀಯರಲ್ಲಿ ಕೊಂಚ ಆತಂಕ ದೂರ ಮಾಡಿತ್ತಾದರೂ ಇವತ್ತು ಮತ್ತೆ ಚಿರತೆ ಸುಳಿದಾಡಿದ ಗುರುತು ಕಂಡುಬಂದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಮೊನ್ನೆ ಅ 31 ರ ಮಧ್ಯರಾತ್ರಿ ಸವಣಾಲು ಗ್ರಾಮದ ಗುರಿಕಂಡ ಆನಂದ ಶೆಟ್ಟಿಯವರ ಮನೆ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನೊಳಗೆ ಚಿರತೆಯೊಂದು ಬಿದಿದ್ದು ಅದನ್ನು ಅರಣ್ಯ ಇಲಾಖೆ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದರಿಂದ ಚಿರತೆಯ ಹಾವಳಿ ಕಡಿಮೆಯಾಗಬಹುದು ಎಂದು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದರು. ಅದರೆ ಒಂದು ವಾರ ಕಳೆಯುವಷ್ಟರಲ್ಲಿ ಮತ್ತೆ ಅದೇ ಜಾಗದಲ್ಲಿ ಚಿರತೆ ಸುಳಿದಾಡಿದ ಹೆಜ್ಜೆ ಗುರುತು ಕಂಡು ಬಂದಿದೆ. ಅದಲ್ಲದೇ ಇವತ್ತು ಮಧ್ಯರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಗುರಿಕಂಡ ಆನಂದ ಶೆಟ್ಟಿಯವರ ಮನೆಯ ಕೋಳಿಯನ್ನು ಹಿಡಿದು ಕೊಂಡು ಹೋಗಿದ್ದು ಈ ಬಗ್ಗೆ ಅರಣ್ಯ ಇಲಾಖೆಗೆ ಮನೆಯವರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಹೆಜ್ಜೆ ಗುರುತು ಪರಿಶೀಲಿಸಿ ಅಗತ್ಯ ಬಿದ್ದಲ್ಲಿ ಮತ್ತೆ ಬೋನು (ಗೂಡು) ಇಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಚಿರತೆ ಹೆಜ್ಜೆ ಗುರುತು ಧೃಡಪಡಿಸಿದ ಅರಣ್ಯ ಇಲಾಖೆ:
ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಜಾಪ್ರಕಾಶ ನ್ಯೂಸ್ ಸಂಪರ್ಕಿಸಿದಾಗ ಚಿರತೆಯ ಹೆಜ್ಜೆ ಗುರುತು ಎಂಬ ಬಗ್ಗೆ ಧೃಢಪಡಿಸಿದ್ದಾರೆ. ಕಳೆದ ವಾರ ಬೋನಿನೊಳಗೆ ಸೆರೆಯಾಗಿರುವ ಚಿರತೆ ಸುಮಾರು ಒಂದುವರೇ ವರ್ಷ ಪ್ರಾಯದ್ದಾಗಿದ್ದು ಅದರ ತಾಯಿ ಮರಿಯನ್ನು ಹುಡುಕಿಕೊಂಡು ಬಂದಿರಬಹುದು.ಮೊನ್ನೆ ಸೆರೆಯಾಗಿದ್ದ ಜಾಗದಲ್ಲೇ ನಾಯಿ ಗೂಡೊಂದ್ದು ಇಟ್ಟಿದ್ದು ಅದರ ಸುತ್ತ ಮುತ್ತ ಚಿರತೆ ಸುಳಿದಾಡಿದೆ. ನಂತರ ಕೋಳಿಯನ್ನು ಹಿಡಿದಿದೆ. ಇವತ್ತು ಸಂಜೆ ಮತ್ತೆ ಬೋನ್ ಇಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: