ಕನ್ಯಾಡಿ ಸರಕಾರಿ ಶಾಲೆಯಲ್ಲಿ ಖಾಯಂ ಮುಖ್ಯೋಪಾಧ್ಯಾಯರ ಮತ್ತು ದೈಹಿಕ ಶಿಕ್ಷಕರ ಕೊರತೆ: ಶಾಸಕ ಹರೀಶ್ ಪೂಂಜಾರಿಗೆ ಮನವಿ

ಬೆಳ್ತಂಗಡಿ: ಕನ್ಯಾಡಿ ಸರಕಾರಿ ಶಾಲೆಗೆ ಖಾಯಂ ಮುಖ್ಯೋಪಾಧ್ಯಾಯರನ್ನು ಮತ್ತು ದೈಹಿಕ ಶಿಕ್ಷಕರನ್ನು ಒದಗಿಸುವಂತೆ ಶಾಸಕ ಹರೀಶ್ ಪೂಂಜಾರಿಗೆ ಮನವಿ ನೀಡಲಾಗಿದೆ.

ತಾಲೂಕಿನ ಅತ್ಯುತ್ತಮ ಸರಕಾರಿ ಶಾಲೆಗಳಲ್ಲಿ ಒಂದಾಗಿರುವ ಕನ್ಯಾಡಿ ಶಾಲೆಯಲ್ಲಿ 250 ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಶಾಲೆಯಲ್ಲಿ ಖಾಯಂ ಮುಖ್ಯೋಪಾಧ್ಯಾಯರ ಹಾಗೂ ದೈಹಿಕ ಶಿಕ್ಷಕರ ಕೊರತೆಯಿದೆ. ಈ ಬಗ್ಗೆ ಬೆಳ್ತಂಗಡಿ ತಾಲೂಕಿನ ಶಾಸಕ ಹರೀಶ್ ಪೂಂಜಾ ರವರಿಗೆ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕನ್ಯಾಡಿ ಇದರ ವತಿಯಿಂದ ಮನವಿ ಸಲ್ಲಿಸಿ ಶಾಲೆಗೆ ಖಾಯಂ ಮುಖ್ಯೋಪಾಧ್ಯಾಯರು ಮತ್ತು ದೈಹಿಕ ಶಿಕ್ಷಕರನ್ನು ಒದಗಿಸುವಂತೆ ಕೇಳಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ರಾಜೇಶ್ ರಾವ್ ಪಿ, ಅವಿನಾಶ್ ಶೆಟ್ಟಿ, ಗಣೇಶ್ ಗೌಡ ಬಜಿಲ, ರಾಘವ ಕುರ್ಮಾನಿ,ಸಚಿನ್ ಗೌಡ,ಅರುಣ್ ನಾಯ್ಕ್, ದಿವಾಕರ್ ಪೂಜಾರಿ ನೀರಚಿಲುಮೆ, ಸುದರ್ಶನ್ ಕೆ.ವಿ ಕನ್ಯಾಡಿ, ವಿದ್ಯಾಧರ್ ರೈ ಪಜಿರಡ್ಕ, ಗಂಗಾಧರ್ ಬಜಿಲ, ರಾಧೇಶ್ ಗೌಡ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

error: Content is protected !!