ಬೆಂಗಳೂರು: ಆನ್‌ಲೈನ್ ಗೇಮಿಂಗ್ ಹುಚ್ಚಾಟಕ್ಕೆ ಬಲಿಯಾದ ಯುವಕನೋರ್ವ ್ದ 1 ಲಕ್ಷ ರೂ. ಸಮೇತ ಮನೆಯಿಂದ ಓಡಿ ಹೋಗಿ ತಿಂಗಳಾದರು ವಾಪಾಸ್ ಮನೆಗೆ ಬಾರದೇ ಇರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯಲಹಂಕದ ಶೇಷಾದ್ರಿಪುರ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದ ಟಿ.ದಾಸರಹಳ್ಳಿಯಲ್ಲಿಯ 18 ವರ್ಷದ ಯುವಕ ಆನ್ಲೈನ್ ಗೇಮ್‌ನಲ್ಲಿ 20 ಸಾವಿರ ರೂ. ಕಳೆದು ಕೊಂಡು ಬಳಿಕ ಒಂದು ಲಕ್ಷ ರೂಪಾಯಿ ನಗದು ಸಮೇತ ತಿಂಗಳ ಹಿಂದೆ ನಾಪತ್ತೆಯಾಗಿದ್ದಾನೆ. ಮಗ ಇವತ್ತು ಬರುತ್ತಾನೆ, ನಾಳೆ ಬರುತ್ತಾನೆ ಎಂದು ಕಾದು ಕುಳಿತಿರುವ ಪೋಷಕರು ಮಗನನ್ನು ಕಾಣದೆ ಕಂಗಾಲಾಗಿದ್ದಾರೆ.
ತಂದೆ ಆಟೋ ಚಾಲಕನಾಗಿದ್ದು, ತಾಯಿ ಗೌರಮ್ಮ ಗೃಹಿಣಿಯಾಗಿದ್ದು ಇವರಿಗೆ ಒಬ್ಬನೆ ಮಗ. ಕಳೆದ 1 ತಿಂಗಳಿನಿAದ ಮಗನನ್ನು ನೋಡದೆ ಸರಿಯಾಗಿ ನಿದ್ದ, ಆಹಾರವಿಲ್ಲದೆ ಚಿಂತನೆಯಲ್ಲಿ ಕೊರಗುತ್ತಿದ್ದಾರೆ.
ಮಗ ಮನೆಗೆ ಬಂದರೆ ಸಾಕು, ಯಾವುದೇ ಹಣದ ವಿಷಯ ಎತ್ತುವುದಿಲ್ಲ, ಮಗ ಕಣ್ಮುಂದೆ ಇದ್ದರೆ ಸಾಕು. ಯಾರಾದರು ನನ್ನ ಮಗನನ್ನು ನೋಡಿದ್ದರೆ, ನಮಗೆ ತಿಳಸಿ ಎಂದು ಗೌರಮ್ಮ ಕಣ್ಣೀರು ಹಾಕುತ್ತಿದ್ದಾರೆ. ಮಗನನ್ನು ಹುಡುಕಿಕೊಡುವಂತೆ ಪೋಷಕರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇತ್ತೀಚೆಗೆ ಮಕ್ಕಳು ಮೊಬೈಲ್ ಗೀಳು ಹೆಚ್ಚಿಸಿಕೊಂಡಿದ್ದು ಪೋಷಕರು ಎಚ್ಚರದಿಂದ ಇರಬೇಕಾಗಿದೆ. ಮಕ್ಕಳ ಮೊಬೈಲ್ ಬಳಕೆ ಮೇಲೆ ನಿಗಾ ಇಟ್ಟು ಅವರನ್ನು ಆಗಾಗ ಎಚ್ಚರಿಸುವ, ತಿಳಿಹೇಳುವ ಕೆಲಸ ಮಾಡಬೇಕಿದೆ.