ಬೆಳ್ತಂಗಡಿ: ಚರ್ಚ್ ರೋಡ್ ರಸ್ತೆಯಲ್ಲಿ ದೊಡ್ಡ ಹೊಂಡಗಳು ನಿರ್ಮಾಣವಾಗಿ ವಾಹನ ದಟ್ಟನೆಯಿಂದ ಟ್ರಾಫಿಕ್ ಜಾಮ್ ಉಂಟಾದ ಬಗ್ಗೆ ಇಂದು ಪ್ರಜಾಪ್ರಕಾಶ ನ್ಯೂಸ್ ವರದಿ ಬಿತ್ತರಿಸಿದ ಬೆನ್ನಲ್ಲೆ ರಸ್ತೆ ಕಾಮಗಾರಿಯ ಗುತ್ತಿಗೆದಾರರು ಹೊಂಡ ಮುಚ್ಚಲು ಕ್ರಮ ವಹಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಚರ್ಚ್ರೊಡ್ ಬಳಿ ರಸ್ತೆಯ ಇಕ್ಕೆಲಗಳನ್ನು ಅಗೆಯಲಾಗಿದೆ. ತೀವ್ರ ಮಳೆಗೆ ರಸ್ತೆ ಹಾಳಾಗಿ ಹೊಂಡಗಳು ನಿರ್ಮಾಣವಾಗಿದೆ. ಬೆಳಗ್ಗೆ ಮತ್ತು ಸಂಜೆ ವಾಹನ ದಟ್ಟನೆ ಹೆಚ್ಚಾಗಿರುವ ಕಾರಣ ಹೊಂಡಮಯ ರಸ್ತೆಯಲ್ಲಿ ಸುಗಮವಾಗಿ ಸಂಚರಿಸಲಾಗದೆ ಪದೆ ಪದೆ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಇದರಿಂದ ಮಕ್ಕಳಿಗೆ ಹೆಚ್ಚಾಗಿ ತೊಂದರೆಯುಂಟಾಗುತ್ತಿತ್ತು.
ಸದ್ಯ ಹೊಂಡ ಮುಚ್ಚಲು ಗುತ್ತಿಗೆದಾರರು ಮುಂದಾಗಿದ್ದು ಸಾಧ್ಯ ಆದಷ್ಟು ಹೆದ್ದಾರಿಯಲ್ಲಿರುವ ಹೊಂಡಗಳಿಗೆ ತಾತ್ಕಾಲಿಕ ಮುಕ್ತಿ ನೀಡುವ ಕಾರ್ಯ ನಡೆದರೆ ಸಂಚಾರಕ್ಕೆ ಅಡೆಚಣೆಯಾಗದಂತೆ ಕ್ರಮವಹಿಸಬಹುದು.